ನ್ಯೂಸ್

ಭಾರತಕ್ಕೆ ಆದ್ಯತೆ ಎಂದ ಶ್ರೀಲಂಕಾ

lakshmihegde

ನವದೆಹಲಿ: ಶ್ರೀಲಂಕಾ ಅಲಿಪ್ತ ವಿದೇಶಾಂಗ ನೀತಿ ಅನುಸರಿಸಲಿದೆ. ಆದರೆ ವ್ಯೂಹಾತ್ಮಕ ಮತ್ತು ಭದ್ರತಾ ವಿಚಾರಗಳಲ್ಲಿ ಭಾರತ ಮೊದಲು ಎಂಬ ನೀತಿಯನ್ನು ಅದು ಬಿಟ್ಟುಕೊಡುವುದಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಜಯಂತ್ ಕೊಲಂಬೇಜ್ ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ ವ್ಯೂಹಾತ್ಮಕ ಅಪಾಯ ಒಡ್ಡುವ ಸಾಮರ್ಥ್ಯ ಶ್ರೀಲಂಕಾಕ್ಕೆ ಇಲ್ಲ. ಅದನ್ನು ಬಯಸುವುದೂ ಇಲ್ಲ ಎಂದು ಅಧ್ಯಕ್ಷ ಗೋತಬಯ ರಾಜಪಕ್ಸ ಹೇಳಿರುವುದಾಗಿ ಟಿವಿ ವಾಹಿನಿಯೊಂದರ ಸಂದರ್ಶನ ದಲ್ಲಿ ಕೊಲಂಬೇಜ್ ತಿಳಿಸಿದ್ದಾರೆ. ಭಾರತದಿಂದ ಅನುಕೂಲ ಪಡೆಯು ವುದು ಶ್ರೀಲಂಕಾದ ಬಯಕೆಯಾಗಿದೆ. ಭದ್ರತೆ ವಿಚಾರದಲ್ಲಿ ಭಾರತಕ್ಕೆ ಖಂಡಿತವಾಗಿಯೂ ಪ್ರಾಶಸ್ಱ ಕೊಡಲಾಗುತ್ತದೆ ಎಂದು ಕೊಲಂಬೇಜ್ ಹೇಳಿದ್ದಾರೆ. ಇದನ್ನೂ ಓದಿ: VIDEO: ಸಿಪಿಎಲ್​: ಸೇಂಟ್​ ಕಿಟ್ಸ್​ ಹಾಗೂ ನೆವಿಸ್​ ಪೇಟ್ರಿಯಾಟ್ಸ್​ ತಂಡಕ್ಕೆ ಮೊದಲ ಜಯ

ಶ್ರೀಲಂಕಾ ಸರ್ಕಾರ ಭಾರತಕ್ಕಿಂತ ಚೀನಾಕ್ಕೆ ಆಪ್ತವಾದುದು ಎಂಬ ಸಾರ್ವತ್ರಿಕ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.  ಹಂಬಂತೋಟ ಬಂದರನ್ನು 99 ವರ್ಷಗಳ ಗುತ್ತಿಗೆ (ಲೀಸ್) ಮೇಲೆ ಚೀನಾಕ್ಕೆ ನೀಡಿದ್ದು ‘ತಪು್ಪ’ ನಿರ್ಧಾರ ಎಂದು ಶ್ರೀಲಂಕಾ ವಿದೇಶಾಂಗ ಕಾರ್ಯದರ್ಶಿ ಕೊಲಂಬೇಜ್ ತಿಳಿಸಿದ್ದಾರೆ.