ನ್ಯೂಸ್

'VD 12' ಚಿತ್ರದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಹೇಳುವುದೇನು?

ಆಂಧ್ರಪ್ರದೇಶ: 'ಅರ್ಜುನ್​ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ ಅಭಿನಯಿಸಲಿರುವ ಮುಂದಿನ ಚಿತ್ರ 'ವಿಡಿ 12' ಬಗ್ಗೆ ಇದೀಗ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಸಿನಿಮಾದ ನಾಯಕಿಯಾಗಿ ಶ್ರೀಲೀಲಾ ಇರಲಿದ್ದಾರೋ ಅಥವಾ ರಶ್ಮಿಕಾ ಮಂದಣ್ಣ ಎಂಟ್ರಿ ಕೊಡಲಿದ್ದಾರೋ ಎಂಬ ಪ್ರಶ್ನೆಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: 

ಇತ್ತೀಚೆಗಷ್ಟೇ ಶಿವ ನಿರ್ವಾಣ ನಿರ್ದೇಶನದ ಪ್ಯಾನ್ ಇಂಡಿಯಾ, ರೋಮ್ಯಾಂಟಿಕ್-ಕಾಮಿಡಿ ಜಾನರ್​ನ​ 'ಖುಷಿ' ಚಿತ್ರವು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಒಟಿಟಿ ಬಿಡುಗಡೆಗೂ ಲಗ್ಗೆಯಿಟ್ಟಿದೆ. ಪ್ರಸ್ತುತ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮೂಡಿಬರಲು ಸಜ್ಜಾಗಿರುವ VD 12 ಚಿತ್ರದ ನಾಯಕಿಯಾಗಿ ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ. ಆದ್ರೆ, ಈ ಬಗ್ಗೆ ಕಳೆದ ಹಲವು ದಿನಗಳಿಂದ ಸಾಕಷ್ಟು ಗೊಂದಲಗಳು ಬುಗಿಲೆದ್ದಿವೆ.

ವದಂತಿಯ ಪ್ರಕಾರ, ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀಲೀಲಾ ಪಾತ್ರದಲ್ಲಿ ರಶ್ಮಿಕಾ ಮಿಂಚಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಕುರಿತಂತೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ನಾಗ ವಂಶಿ, 'ವಿಡಿ 12' ಸಿನಿಮಾದಲ್ಲಿ ಶ್ರೀಲೀಲಾ ಅವರೇ ಹೀರೋಯಿನ್​ ಆಗಿ ಉಳಿದಿದ್ದಾರೆ. ಯಾವುದೇ ಪಾತ್ರ ಬದಲಾವಣೆಗಳನ್ನು ಮಾಡುವ ಉದ್ದೇಶವಿಲ್ಲ ಎಂದು ದೃಢಪಡಿಸಿದ್ದಾರೆ,(ಏಜೆನ್ಸೀಸ್).