ನ್ಯೂಸ್

‘ವಿಶ್ವಂಭರ’ದಲ್ಲಿ 'ಕಿಸ್ಸಿಕ್​' ಬೆಡಗಿ? ಮೆಗಾಸ್ಟಾರ್​ ಕೊಟ್ಟ ವಿಶೇಷ ಉಡುಗೊರೆಗೆ ಶ್ರೀಲೀಲಾ ಸಂತಸ | Sreeleela

Sreeleela: ಕನ್ನಡ, ತೆಲುಗು ನಂತರ ಬಾಲಿವುಡ್​ ಅಂಗಳಕ್ಕೆ ಹಾರಿರುವ ಕನ್ನಡದ ನಟಿ ಶ್ರೀಲೀಲಾ, ಸದ್ಯ ಹಲವು ಬಹುನಿರೀಕ್ಷಿತ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ.

'ರಾಬಿನ್​ಹುಡ್'​, 'ಮಾಸ್​ ಜಾತ್ರಾ', 'ಉಸ್ತಾದ್ ಭಗತ್ ಸಿಂಗ್' ಮತ್ತು ನಟ ಶಿವಕಾರ್ತಿಕೆಯನ್ ಅಭಿನಯಿಸಲಿರುವ 'ಎಸ್​ಕೆ25' ಚಿತ್ರಗಳಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳು 2025ರಲ್ಲಿ ತೆರೆಕಾಣುವ ಸೂಚನೆಗಳು ಸಿಕ್ಕಿದ್ದೇ ಆದರೂ ಬಿಡುಗಡೆಯ ಅಧಿಕೃತ ದಿನಾಂಕ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ.

ಪ್ರಸ್ತುತ ಟಾಲಿವುಡ್​ನ ದಿಗ್ಗಜ ನಟ, ಮೆಗಾಸ್ಟಾರ್ ಚಿರಂಜೀವಿ 'ವಿಶ್ವಂಭರ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಇದೇ ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಚಿತ್ರೀಕರಣ ನಡೆಯುತ್ತಿರುವ ಜಾಗಕ್ಕೆ ಎಂಟ್ರಿ ಕೊಟ್ಟಿರುವ ಶ್ರೀಲೀಲಾ, ಚಿರಂಜೀವಿ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿವೆ.

ನಿನ್ನೆ (ಮಾ.08) ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವಂಭರ ಚಿತ್ರದ ಸೆಟ್‌ನಲ್ಲಿದ್ದ ಚಿರಂಜೀವಿ, ನಟಿ ಶ್ರೀಲೀಲಾ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ದುರ್ಗಾ ದೇವಿಯ ಮುಖವಿರುವ ಬೆಳ್ಳಿ ಶಂಖವನ್ನು ನಟಿಗೆ ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಹಲವರ ಕುತೂಹಲಕ್ಕೂ ಕಾರಣವಾಗಿದೆ. ವಿಶ್ವಂಭರ ಸೆಟ್​ನಲ್ಲಿ ಶ್ರೀಲೀಲಾ ತೊಟ್ಟಿರುವ ಉಡುಗೆ ನೋಡಿದರೆ, ಅವರೂ ಸಹ ಚಿತ್ರದ ಭಾಗವಾಗಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).