ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಮತ್ತೆ ಭಾರತ-ಪಾಕ್ ಜಟಾಪಟಿ 
ನ್ಯೂಸ್

‘ಸುಳ್ಳು ಮಾಹಿತಿ ಹರಡುತ್ತಿದೆ’: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು Indus Waters Treaty

ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ಆರೋಪಗಳಿಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಂಡಿಸಿದ ವಾದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ

ಸಿಂಧೂ ಜಲ ಒಪ್ಪಂದಕ್ಕೆ ಭಾರತ-ಪಾಕ್ ನಡುವೆ ಮತ್ತೆ ತಿಕ್ಕಾಟ

ಪಾಕಿಸ್ತಾನದ ಆರೋಪಗಳಿಗೆ ತಿರುಗೇಟು ನೀಡಿದ ಇಂಡಿಯಾ

ಭಾರತದಿಂದ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪು ತಿರಸ್ಕಾರ

India-Pakistan: ಸಿಂಧೂ ಜಲ ಒಪ್ಪಂದದ ವಿಚಾರದಲ್ಲಿ ಭಾರತ-ಪಾಕಿಸ್ತಾನ ನಡುವೆ ಮತ್ತೆ ತಿಕ್ಕಾಟ ಶುರುವಾಗಿದೆ. ಇತ್ತೀಚಿನ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತ ಇದಕ್ಕೆ ತಿರುಗೇಟು ನೀಡಿದೆ.

1960ರ ಸಿಂಧೂ ಜಲ ಒಪ್ಪಂದ ಜಾರಿಯಲ್ಲಿದ್ದು, ಯಾವುದೇ ದೇಶ ಏಕಪಕ್ಷೀಯವಾಗಿ ಅದನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಾದಿಸಿದೆ. ಆದರೆ ಭಾರತ ಈ ವಾದವನ್ನು ತಿರಸ್ಕರಿಸಿದೆ.

ನ್ಯಾಯಮಂಡಳಿಯ ತೀರ್ಪು ಒಪ್ಪಿಕೊಳ್ಳದ ಭಾರತ

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನ ವಾಸ್ತವಾಂಶಗಳನ್ನು ತಿರುಚಿ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತ ಒಪ್ಪಿಕೊಳ್ಳದ ನ್ಯಾಯಮಂಡಳಿಯ ತೀರ್ಪಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಂಧೂ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದ್ದು ಏಕೆ?

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ, ಏಪ್ರಿಲ್ 23ರಂದು ಭಾರತ ಸಿಂಧೂ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಈ ನಿಲುವು ಮುಂದುವರಿಯಲಿದೆ ಎಂದು ಭಾರತ ಹೇಳಿದೆ.

ಆಗಸ್ಟ್ 31, 2026ರಂದು ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ ತೀರ್ಪಿನಲ್ಲಿ ಒಪ್ಪಂದ ಜಾರಿಯಲ್ಲಿದೆ ಎಂದು ಹೇಳಲಾಗಿದೆ. ಆದರೆ ಭಾರತ ಈ ತೀರ್ಪನ್ನು ತಿರಸ್ಕರಿಸಿದ್ದು, ಆ ನ್ಯಾಯಮಂಡಳಿಗೆ ಈ ವಿಚಾರದಲ್ಲಿ ಅಧಿಕಾರವಿಲ್ಲ ಎಂದು ಪುನರುಚ್ಚರಿಸಿದೆ.

ಇದನ್ನೂ ಓದಿ: ಮುಸ್ಲಿಂ ಪತಿಯ ಜತೆ ಬದುಕಲು ಯುವತಿಗೆ ಅನುಮತಿ: ‘ಸಂಗಾತಿ ಆಯ್ಕೆ ಹಕ್ಕು’ ಎಂದ ಹೈಕೋರ್ಟ್ | Muslim Husband

ಹೀಗಾಗಿ ಸಿಂಧೂ ಜಲ ಒಪ್ಪಂದದ ವಿವಾದ ಇದೀಗ ನೀರಿನ ಹಂಚಿಕೆ ಮಾತ್ರವಲ್ಲದೆ, ನ್ಯಾಯಮಂಡಳಿಯ ಅಧಿಕಾರದ ವಿಚಾರದಲ್ಲೂ ಭಾರತ-ಪಾಕ್ ನಡುವಿನ ರಾಜತಾಂತ್ರಿಕ ತಿಕ್ಕಾಟಕ್ಕೆ ಕಾರಣವಾಗಿದೆ. (ಏಜೆನ್ಸೀಸ್)