ಸಿಡ್ನಿ: ನೀರು ಮೇಲಿನಿಂದ ಕೆಳಕ್ಕೆ ಹರಿಯುವುದು ಪ್ರಕೃತಿ ನಿಯಮ ಹಾಗೂ ಅಷ್ಟೇ ಸಹಜ. ಆದರೆ ಕೆಲವೊಮ್ಮೆ, ಕೆಲ ಸಂದರ್ಭಗಳಲ್ಲಿ ಇದಕ್ಕೆ ವಿರುದ್ಧವಾದ ವಿದ್ಯಮಾನಗಳು ಘಟಿಸುವುದು ಉಂಟು.
ಅಂತೆಯೇ, ವಿಚಿತ್ರ ಪ್ರಾಕೃತಿಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ ಆಸ್ಟ್ರೇಲಿಯಾದ ಸಿಡ್ನಿ ಸಮೀಪವಿರುವ ರಾಯಲ್ ನ್ಯಾಷನಲ್ ಪಾರ್ಕ್ನ ಜಲಪಾತ. ಇಲ್ಲಿ ನೀರು ಮೇಲಿನಿಂದ ಕೆಳಕ್ಕೆ ಹರಿಯುವುದಿಲ್ಲ, ಬದಲಿಗೆ ಮತ್ತೆ ಆಗಸದತ್ತಲೇ ಮಾಡುತ್ತದೆ.
ಸೋಮವಾರ ಇಲ್ಲಿ ಕಂಡ ಬಂದ ವಿದ್ಯಮಾನ ಅಚ್ಚರಿ ಮೂಡಿಸಿದೆ. ಕರಾವಳಿ ಅಂಚಿಗೆ ಇರುವ ಈ ಜಲಪಾತದ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ನೀರು ಪ್ರಪಾತದಿಂದ ಕೆಳಕ್ಕೆ ಹರಿದು ನೆಲ ಸೇರುವುದೇ ಇಲ್ಲ.....!
ಈ ಪ್ರದೇಶದಲ್ಲಿ ಗಂಟೆಗೆ 70 ಕಿ.ಮೀ. ಗೂ ಅಧಿಕ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಈ ವೇಗದಿಂದಾಗಿ ನೀರು ಕೆಳಮುಖವಾಗಿ ಧುಮ್ಮಿಕ್ಕುವ ನೀರು ಮತ್ತೆ ಆಕಾಶಮುಖಿಯಾಗಿತ್ತು. ಜಲಪಾತದ ದೃಶ್ಯ ವೈಮಾನಿಕ ಚಿತ್ರೀಕರಣದಲ್ಲಿ ಸೆರೆಯಾಗಿ ಸೌಂದರ್ಯವನ್ನು ಇಮ್ಮಡಿಸಿತ್ತು.
ಕರಾವಳಿಯುದ್ದಕ್ಕೂ ಇಂಥ ಹಲವು ಜಲಪಾತಗಳು ಕಾಣಸಿಗುತ್ತವೆ. ಇವುಗಳನ್ನು ನೋಡಲೆಂದೇ ಜನರು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಗಾಳಿಯ ವೇಗ ಹೆಚ್ಚಾಗಿದ್ದಾಗ ಈ ಜಲಪಾತಗಳು ಊರ್ಧ್ವಮುಖಿಯಾಗುತ್ತವೆ.