ನ್ಯೂಸ್

ಬ್ಯಾಂಕಾಕ್​​​​​ನಲ್ಲಿ ಸ್ಪಂದನಾ ವಿಜಯ್ ನಿಧನ; ಥಾಯ್ಲೆಂಡ್​​​​ನಿಂದ ಮೃತದೇಹ ತರಲು ಏನೆಲ್ಲಾ ಕಾನೂನು ಪ್ರಕ್ರಿಯೆಗಳಿವೆ?

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್​​​​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತದೇಹ ಇಂದು ಭಾರತಕ್ಕೆ ಬರುವುದು ಬಹುತೇಕ ಅನುಮಾನ.

ಥಾಯ್ಲೆಂಡ್​​​​ನಿಂದ ಭಾರತಕ್ಕೆ ಮೃತ ದೇಹ ತರಲು ಕೆಲವು ರೀತಿರಿವಾಜುಗಳಿವೆ. ಮೊದಲಿಗೆ ಆಸ್ಪತ್ರೆಯಿಂದ, ವೈದ್ಯಕೀಯ ವರದಿ, ಮರಣ ಪ್ರಮಾಣ ಪತ್ರ ಪಡೆಯಬೇಕು. ಆ ನಂತರ ಸಂಪೂರ್ಣವಾದ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು. ಆ ರಿಪೋರ್ಟ್ ಬೇರೆ ಭಾಷೆಯಲ್ಲಿದ್ದರೆ ಅದನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿಸಬೇಕು. ಇದರ ಜೊತೆಗೆ ಮೃತರ ಪಾಸ್ ಪೋರ್ಟ್ ಹಾಗೂ ವೀಸಾ ಪ್ರತಿಯ ಜೆರಾಕ್ಸ್ ಕೊಡಬೇಕು. ಇಷ್ಟನ್ನು ಭಾರತೀಯ ಎಂಬಸ್ಸಿಗೆ ನೀಡಬೇಕು.

ಇದಾದ ಬಳಿಕ‌ ಎಂಬಸ್ಸಿ ಮೃತದೇಹ ರವಾನೆಗೆ ಸಂಬಂಧಿಸಿದಂತೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗಳ ಬಳಿಕವೇ ಮೃತದೇಹ ರವಾನೆ ಮಾಡಲಾಗುತ್ತದೆ.