ನ್ಯೂಸ್

ಬ್ಯಾಂಕಾಕ್​ನಿಂದ ಬೆಂಗಳೂರಿಗೆ ತಲುಪಿತು ಸ್ಪಂದನಾ ಪಾರ್ಥಿವ ಶರೀರ

ಬೆಂಗಳೂರು: ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ ಸ್ಪಂದನಾ ಅವರ ಪಾರ್ಥಿವ ಶರೀರ ಇದೀಗ ಬೆಂಗಳೂರಿಗೆ ತಲುಪಿದೆ. ಈಗಷ್ಟೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ತರಲಾಗಿದೆ.

ಥಾಯ್ ಏರ್​​ವೇಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಂದನಾ ಪಾರ್ಥಿವ ಶರೀರವನ್ನು ತರಲಾಗಿದ್ದು, ಜೊತೆಯಲ್ಲಿ ಪತಿ ವಿಜಯ ರಾಘವೇಂದ್ರ ಮತ್ತು ಸಂಬಂಧಿಕರು ಇದ್ದಾರೆ.

ವಿಮಾನ ನಿಲ್ದಾಣದ ಡಬ್ಲ್ಯುಎಫ್​ಎಸ್​ ಏರ್ ಕಾರ್ಗೋ ಟರ್ಮಿನಲ್​​ಗೆ ಇನ್ನು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರ ತಲುಪಲಿದ್ದು, ನಿಯಮಾನುಸಾರ ಮೃತದೇಹ ಸ್ಕ್ಯಾನ್ ಮಾಡಿ ದಾಖಲೆ ಪರಿಶೀಲಿಸಿದ ಬಳಿಕ ಅಧಿಕಾರಿಗಳು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲಿದ್ದಾರೆ. ಆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.