ನ್ಯೂಸ್

ಸ್ಪೇನ್​ನಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ 205ಕ್ಕೆ ಏರಿಕೆ! | Spain Floods

ಚೀವಾ: ನಿರಂತರ ಹಾಗೂ ಭಾರೀ ಮಳೆಗೆ ತತ್ತರಿಸುವ ಸ್ಪೇನ್​, ಭೀಕರ ಪ್ರವಾಹಕ್ಕೆ (Spain Floods) ತುತ್ತಾಗಿದೆ. ವರುಣನ ಆರ್ಭಟಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಇದೀಗ 205ಕ್ಕೆ ಏರಿಕೆಯಾಗಿದೆ.

ಭಾರೀ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು, ರಸ್ತೆಯಲ್ಲಿದ್ದ ಮನೆಗಳು ಮತ್ತು ಕಾರುಗಳು ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಐರೋಪ್ಯ ದೇಶವಾದ ಸ್ಪೇನ್​ನ ವೆಲೆನ್ಸಿಯಾ ಪ್ರಾಂತ್ಯದಲ್ಲಿ ನಿನ್ನೆ (ಅ.31) ದಿಢೀರ್ ಮಳೆ ಸುರಿದ ಪರಿಣಾಮ ಅಲ್ಲಿನ ನದಿಗಳಲ್ಲಿ ಭಾರಿ ಪ್ರವಾಹ ಉಂಟಾಗಿ, ಮುಖ್ಯರಸ್ತೆಗಳು ಹಾಗೂ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.