ಚೆನ್ನೈ: 73ರ ಇಳಿವಯಸ್ಸಿನಲ್ಲೂ ಯುವಕರು ನಾಚಿ ನೀರಾಗುವಂತೆ ನಟನೆ ಮಾಡುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ರಜಿನಿಕಾಂತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಕೂಲಿ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಿರುವ ನಟ ರಜಿನಿಕಾಂತ್ ಆ ಬಳಿಕ ಜೈಲರ್-2 ಸಿನಿಮಾದ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಭಾರತ ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಹೆಚ್ಚಿನ ಬೇಡಿಕೆ ಹೊಂದಿರುವ ರಜಿನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟರೊಬ್ಬರು ನಿರಾಕರಿಸಿದ್ದಾರೆ ಎಂಬ ವಿಷಯ ಕೇಳಿ ಬಂದಿದೆ. ಈ ವಿಚಾರ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಖ್ಯಾತ ನಟನ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಇದನ್ನೂ ಓದಿ: ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಸಿಎಂಗೆ ಚಿನ್ನದ ಪದಕ ಖಚಿತ: ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯ
ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಿರುವ ರಜಿನಿಕಾಂತ್ ಮ್ಯಾನರಿಸಂಗೆ ಸೂಟ್ ಆಗುವ ಖಳನಾಯಕನನ್ನು ಹುಡುಕಲಾಗುತ್ತಿದೆ. ಈ ಸಂಬಂಧ ಚಿತ್ರತಂಡವು ಬಾಲಿವುಡ್ ನಾಯಕನಟರಾದ ಶಾರುಖ್ ಖಾನ್ ಹಾಗೂ ರಣವೀರ್ ಸಿಂಗ್ ಅವರನ್ನು ಸಂಪರ್ಕಿಸಿತ್ತು. ಆದರೆ, ಈ ಇಬ್ಬರು ನಟರು ರಜಿನಿ ಎದುರು ಖಳನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಟಾಲಿವುಡ್ನ ಹಿರಿಯ ನಟ ನಾಗಾರ್ಜುನ ಅವರು ಕೂಲಿ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದ್ದು, ನಾಗಾರ್ಜುನ ಅವರ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ಜತೆಗೆ ಅಮಿತಾಬ್ ಬಚ್ಚನ್, ಭಗತ್ ಬೆಸಿಲ್, ರಿತಿಕಾ ಸಿಂಗ್, ಅಭಿರಾಮಿ ಸೇರಿದಂತೆ ಹಲವು ನಟ-ನಟಿಯರು ಅಭಿನಯಿಸುತ್ತಿದ್ದಾರೆ. ಚಿತ್ರವು 2025ರಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾವು ಜೈಲರ್ ಚಿತ್ರದ ದಾಖಲೆಗಳನ್ನು ಮುರಿಯಲಿದೆ ಎಂದು ಬಾಕ್ಸ್ಆಫೀಸ್ ಪಂಡಿತರು ಅಂದಾಜಿಸಿದ್ದಾರೆ.