ನ್ಯೂಸ್

ಟಿಕ್​ಟಾಕ್​ನಲ್ಲಿ ಕಣ್ಸನ್ನೆ ಸುಂದರಿಯ ಝಲಕ್​ ನೋಡಿ...

ತಿರುವನಂತಪುರ: ಕೆಲ ವರ್ಷಗಳ ಹಿಂದಷ್ಟೇ ಯಾರಿಗೂ ಪರಿಚಯವೇ ಇಲ್ಲದಿದ್ದ ಪ್ರಿಯಾ ಪ್ರಕಾಶ್​ ವಾರಿಯರ್​ ಕಳೆದ ವರ್ಷ ರಾತ್ರೋರಾತ್ರಿ ಮನೆಮನೆಗಳ ಮಾತಾಗಿಬಿಟ್ಟರು. ಒಂದೇ ಒಂದು ಕಣ್ಣು ಮಿಟಿಕಿಸುವ ಮೂಲಕ, ಖ್ಯಾತಿ ಪಡೆದ ಈ ನಟಿಯದ್ದೇ ಫೋಟೋ ವರ್ಷಗಟ್ಟಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

"ಕಣ್ಸನ್ನೆ ಹುಡುಗಿ" ಎಂದು ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಮೂಲಕ ಪ್ರಸಿದ್ದರಾದಳು ಮಲಯಾಳದ ಈ ಬೆಡಗಿ. ಸ್ಯಾಂಡಲ್​ವುಡ್​ ಸೇರಿದಂತೆ ಅನೇಕ ಭಾಷೆಗಳಲ್ಲಿ ಕೂಡ ಭಾರಿ ಬೇಡಿಕೆ ಕುದುರಿಸಿಕೊಂಡಳು.

"ಒರು ಆಡಾರ್ ಲವ್" ಮಲಯಾಳ ಚಿತ್ರದಲ್ಲಿ ಈಕೆಯ ಅಭಿನಯಕ್ಕೆ ಮನಸೋತ ನಿರ್ದೇಶಕರು ತಮ್ಮ ಮುಂದಿನ ಚಿತ್ರಗಳಲ್ಲಿ ಪ್ರಿಯಾಳನ್ನೇ ನಾಯಕಿ ಮಾಡುವ ಆಸೆ ಪಟ್ಟಿದ್ದರು. ಮಾಣಿಕ್ಯ ಮಲರಾಯ ಪೂವಿ' ಹಾಡಿನಲ್ಲಿ ಕಣ್ಣುಮಿಟುಕಿಸಿ ಇಡೀ ಸಿನಿ ರಸಿಕರ ಹೃದಯ ಗೆದ್ದುಬಿಟ್ಟಳು ಈ ಬೆಡಗಿ.

ಯಾವಾಗ ಪ್ರಿಯಾಳ ಕಣ್ಸನ್ನೆ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತೋ ಆ ನಂತರವಂತೂ ಪ್ರಿಯಾ ಬಹು ಬೇಡಿಕೆಯ ನಟಿಯಾಗಿಬಿಟ್ಟಳು. ಸ್ಯಾಂಡಲ್​ವುಡ್​ಗೆ ಪರಿಚಯಿಸಲು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಅಷ್ಟು ಬೇಡಿಕೆ ಈಕೆಗೆ.

ಮಲಯಾಳದ ಈ ನಟಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದೂ ಸಾಮಾಜಿಕ ಜಾಲತಾಣದ ಮೂಲಕವೇ. ಹೌದು. ಮೂರು ಭಾಷೆಗಳಲ್ಲಿ ಟಿಕ್​ಟಾಕ್​ ಮಾಡಿರುವ ಈ ಸುಂದರಿಯ ವೀಡಿಯೋ ಇದೀಗ ಸಕತ್​ ವೈರಲ್​ ಆಗಿದೆ.

ಇಂಗ್ಲಿಷ್​, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಟಿಕ್​ಟಾಕ್​ ಮಾಡಲಾಗಿದೆ. ಈಕೆಯ ಫ್ಯಾನ್ಸ್​ಗಳೆಲ್ಲಾ ಈ ಟಿಕ್​ಟಾಕ್​ನಿಂದಾಗಿ ಅಭಿಮಾನ ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಪ್ರತಿಭೆಗೆ ಭಾಷೆಯ ಗಡಿ ಇಲ್ಲ ಎಂದಿದ್ದಾರೆ. ದಯವಿಟ್ಟು ಹಿಂದಿಯಲ್ಲಿ ಕೂಡ ಟಿಕ್​ಟಾಕ್​ ಅಭಿನಯ ಮಾಡಿ ಎಂದು ಕೆಲವರು ಮನವಿ ಮಾಡಿಕೊಂಡಿದ್ದಾರೆ. ಆದರೆ ಕೆಲವರು ಎಲ್ಲಾ ವೀಡಿಯೋದಲ್ಲಿಯೂ ನಟನೆ ಒಂದೇ ರೀತಿಯಿದ್ದು, ಸ್ವಲ್ಪ ಆ್ಯಕ್ಟಿಂಗ್​ ಬದಲಾಯಿಸಿಕೊಳ್ಳಿ ಎಂದೂ ಕಾಲೆಳೆದಿದ್ದಾರೆ.

ಇಲ್ಲಿದೆ ನೋಡಿ ಪ್ರಿಯಾಳ ಟಿಕ್​ಟಾಕ್​ ಮೋಡಿ: