ಚೆನ್ನೈ: ದಕ್ಷಿಣದ ನಾಯಕಿ ಸುನೈನಾ(Sunainaa) ಪ್ರೀತಿ ಮತ್ತು ಪ್ರೇಮದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾರನ್ನಾದರೂ ಪ್ರೀತಿಸಲು ನನಗೆ ಸಮಯವಿಲ್ಲ, ಮದುವೆಗೆ ಇದ್ದಿದ್ದೂ ಸಮಯವೇ ಇಲ್ಲ. ಇಲ್ಲಿಯವರೆಗೆ ಚಲನಚಿತ್ರಗಳನ್ನು ಪ್ರೀತಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತೆಲುಗಿನ ‘ರೆಜಿನಾ’ ಸಿನಿಮಾದ ನಂತರ ‘ರಾಕೆಟ್ ಡ್ರೈವರ್’ ಸಿನಿಮಾದಲ್ಲಿ ನಟಿಸಿದ್ದ ಸುನೈನಾ ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಪತ್ರಕರ್ತರಿಂದ ಎದುರಾದ ಪ್ರಶ್ನೆಗೆ ಸುನೈನಾ ದಿಟ್ಟ ಉತ್ತರ ನೀಡಿದ್ದಾರೆ.
'ನಾನು ಮೊದಲಿನಿಂದಲೂ ಸಿನಿಮಾವನ್ನು ಮಾತ್ರ ಪ್ರೀತಿಸುತ್ತೇನೆ ಹೊರತು ಯಾರನ್ನೂ ಪ್ರೀತಿಸುವುದಿಲ್ಲ. ಬಿಡುವಿನ ವೇಳೆಯಲ್ಲಿ ಮನರಂಜನೆಗಾಗಿ ವೆಬ್ ಸೈಟ್ ಗಳನ್ನು ನೋಡುತ್ತಲೇ ಇರುತ್ತೇನೆ. ಇದರಿಂದ ಹಲವು ವಿಷಯಗಳನ್ನು ಕಲಿಯುತ್ತಿದ್ದೇನೆ ಎಂದರು.
ಸುನೈನಾ ತನ್ನ ಬೆರಳಿಗೆ ವಜ್ರದ ಉಂಗುರವನ್ನು ಹೊಂದಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಮತ್ತು ಅದಕ್ಕೆ 'ಲಾಕ್' ಎಂದು ಶೀರ್ಷಿಕೆ ನೀಡಿದಾಗ, ಆಕೆ ದುಬೈ ಯೂಟ್ಯೂಬರ್ ಅನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹಬ್ಬಿತ್ತು. ಇದೀಗ ಈ ಊಹಾಪೋಹಗಳಿಗೆ ಸುನೈನಾ ಪೂರ್ಣವಿರಾಮ ಹಾಕಿದ್ದಾರೆ.
ಕುಮಾರ್ ವರ್ಸಸ್ ಕುಮಾರಿ ಎಂಬ ತೆಲುಗು ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಸುನೈನಾ ಆ ನಂತರ ತಮಿಳಿನಲ್ಲಿ ಎರಡುಮೂರು ಸಿನಿಮಾ ಮಾಡಿ ಹೆಸರು ಮಾಡಿದ್ದಾರೆ. ಇದೀಗ ತೆಲುಗು ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಶ್ರೀ ವಿಷ್ಣು ಅಭಿನಯದ ತೆಲುಗು ನೇರ ಚಿತ್ರ ರಾಜ ರಾಜ ಚೋರಾ, ನಾನಿ ಮೀಟ್ ಕ್ಯೂಟ್ ಮತ್ತು ಚದ್ರಂಗಂ ವೆಬ್ ಸೀರೀಸ್‌ನಲ್ಲಿಯೂ ಅವರು ನಟಿಸಿದ್ದಾರೆ.