ನ್ಯೂಸ್

ಅಜ್ಜಿಯ ಕನಸು ನನಸಾಗಿಸಿದ ಸೋನು ಸೂದ್​; ಶುರುವಾಯ್ತು ನೋಡಿ ಮಾರ್ಷಲ್​ ಆರ್ಟ್ಸ್​ ಶಾಲೆ

ಲಾಕ್​ಡೌನ್​ ಸಮಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆದ ವಿಡಿಯೋಗಳ ಪೈಕಿ ರಸ್ತೆ ಬದಿಯಲ್ಲಿ ಮಾರ್ಷಲ್​ ಆರ್ಟ್ಸ್​ ಪ್ರದರ್ಶಿಸಿದ್ದ ಅಜ್ಜಿಯೊಬ್ಬರ ವಿಡಿಯೋ ಸಹ ಹೆಚ್ಚು ಪ್ರಶಂಸೆಗೆ ಒಳಪಟ್ಟಿತ್ತು. ಆ ವಿಡಿಯೋ ಕಂಡೊಡನೆ, ಆ ಅಜ್ಜಿಯ ಸಂಪೂರ್ಣ ಮಾಹಿತಿ ಸಿಕ್ಕರೆ ಕಳುಹಿಸಿ, ಅವರೊಗೊಂದು ಮಾರ್ಷಲ್​ ಆರ್ಟ್ಸ್​ ಶಾಲೆ ವ್ಯವಸ್ಥೆ ಮಾಡಲಿದ್ದೇನೆ ಎಂದಿದ್ದರು ಬಾಲಿವುಡ್​ ನಟ ಸೋನು ಸೋದ್​. ಇದೀಗ ಆ ಗಳಿಗೆ ಕೂಡಿಒಂದಿದೆ.

ಹೌದು, ಮುಂಬೈ ಮೂಲದ ಶಾಂತಾ ಪವಾರ್ ಎಂಬುವವರೇ ರಸ್ತೆಯಲ್ಲಿ ಮಾರ್ಷಲ್​ ಆರ್ಟ್ಸ್​ ಪ್ರದರ್ಶಿಸಿದ್ದರು. ಇದೀಗ ಜೀವರಕ್ಷಕ ಕಲೆಗಾಗಿ ಶಾಲೆ ತೆರೆಯಬೇಕೆಂಬ ಕನಸನ್ನು ಸೋನು ಸೂದ್​ ನನಸು ಮಾಡಿಕೊಟ್ಟಿದ್ದು, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮಾರ್ಷಲ್​ ಆರ್ಟ್ಸ್​ ಕಲಿಸಿಕೊಡುವಲ್ಲಿ ಶಾಂತಾ ಪವಾರ್ ತೊಡಗಿಸಿಕೊಂಡಿದ್ದಾರೆ.

ವಿಶೇಷ ಏನೆಂದರೆ, ಮಾರ್ಷಲ್​ ಆರ್ಟ್ಸ್​ ಶಾಲೆಗೆ ಸೋನು ಸೂದ್​ ಅವರ ಹೆಸರಿಟ್ಟಿರುವ ಶಾಂತಾ ಪವಾರ್, ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ನೆನಪಿನಲ್ಲಿಯೇ ಶಾಲೆ ಮುಂದುವರಿಯಲಿ. ಹಾಗಾಗಿ ಅದಕ್ಕೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ. ಆದಷ್ಟು ಬೇಗ ಒಂದು ಬಾರಿ ಭೇಟಿ ನೀಡಿ’ ಎಂದು ವಿಡಿಯೋ ಮೂಲಕ ಶಾಂತಾ ಪವಾರ್ ಕೋರಿದ್ದಾರೆ. (ಏಜೆನ್ಸೀಸ್​)