ರಾಜೀವ್ ಗಾಂಧಿ ಜತೆಗಿನ ಪ್ರೇಮಕಥೆ ಹಂಚಿಕೊಂಡ ಸೋನಿಯಾ ಗಾಂಧಿ 
ನ್ಯೂಸ್

ಸೋನಿಯಾ ಗಾಂಧಿ ಚೊಚ್ಚಲ ಎಕ್ಸ್ ಪೋಸ್ಟ್: ರಾಜೀವ್ ಜತೆಗಿನ ಪ್ರೇಮಕಥೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ! | Sonia Gandhi's X post

ಸಾಮಾಜಿಕ ಜಾಲತಾಣಗಳಿಗೆ ಕಾಲಿಟ್ಟಿರುವ ಸೋನಿಯಾ ಗಾಂಧಿ, ನವೆಂಬರ್ 10ರಂದು ಹೊರಬರಲಿರುವ ತಮ್ಮ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆ ಹಾಗೂ ರಾಜೀವ್ ಗಾಂಧಿ ಜೊತೆಗಿನ ಮೊದಲ ಭೇಟಿಯ ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಮೊದಲ ಎಕ್ಸ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ

ನವೆಂಬರ್ 10ರಂದು 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆ ಬಿಡುಗಡೆ

ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ನೆನಪುಗಳ ಮೆಲುಕು

Sonia Gandhi's first X post: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಎಕ್ಸ್ ಹಾಗೂ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದು, ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ 'ಬೆಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಹಾಗೂ ರಾಜೀವ್ ಗಾಂಧಿ ಜತೆಗಿನ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾರೆ.

1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನ 'ದಿ ವರ್ಸಿಟಿ' ಗ್ರೀಕ್ ರೆಸ್ಟೋರೆಂಟ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದ ಕ್ಷಣಗಳನ್ನು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ. ‘ಅವರ ಸೌಂದರ್ಯ ಹಾಗೂ ಮೃದು ಸ್ವಭಾವ ಮೊದಲ ನೋಟದಲ್ಲೇ ನನ್ನ ಮನಗೆದ್ದಿತ್ತು’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿ ಸಿಹಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!

ಇನ್ನು, 544 ಪುಟಗಳ ಈ ಪುಸ್ತಕವು ಇಟಲಿಯಲ್ಲಿನ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಅವರ ಭೇಟಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯ ದುರಂತಗಳು ಮತ್ತು ಭಾರತೀಯ ರಾಜಕಾರಣದಲ್ಲಿ ಅವರ ಪಾತ್ರದ ಸಂಪೂರ್ಣ ವಿವರಗಳನ್ನು ಒಳಗೊಂಡಿದೆ. ಈ ಪುಸ್ತಕವು ಅಲ್ಫ್ರೆಡ್ ಎ.ನಾಪ್ಫ್ ಪ್ರಕಾಶನದಿಂದ ಜಾಗತಿಕವಾಗಿ ಮತ್ತು ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)