Sonam Raghuvanshi: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಟ್ವಿಸ್ಟ್ಗಳ ಸರಮಾಲೆಯಿಂದಲೇ ಕೂಡಿ ಹೋಗಿದೆ. ಟ್ರೆಕ್ಕಿಂಗ್ ನೆಪದಲ್ಲಿ ಪತಿಯನ್ನು ಹನಿಮೂನ್ ಕರೆದೊಯ್ದ ಕಿರಾತಕಿ ಪತ್ನಿ, ಪ್ರಿಯಕರನ ಜತೆಗೂಡಿ ಬರ್ಬರವಾಗಿ ಹತ್ಯೆಗೈದ ಘಟನೆ ಸದ್ಯ ರಾಜಾ ರಘುವಂಶಿ ಹೆತ್ತವರನ್ನು ಕಂಗಾಲಾಗಿಸಿದೆ. ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಸೋನಮ್ ಬಗ್ಗೆ ಪ್ರತಿದಿನ ಆಘಾತಕಾರಿ ಸುದ್ದಿಗಳು ಹೊರಬೀಳುತ್ತಲೇ ಇವೆ.
ಇದನ್ನೂ ಓದಿ: ಇಂದಿನಿಂದ ಡಬ್ಲ್ಯುಟಿಸಿ ನಾಲ್ಕನೇ ಸೀಸನ್ ಆರಂಭ: 9 ತಂಡ, 131 ಪಂದ್ಯಗಳು, ಭಾರತದ ವೇಳಾಪಟ್ಟಿ ಹೀಗಿದೆ… WTC 2025-27
ಮೇಘಾಲಯದ ಝರಿ ಬಳಿ ಸೋನಮ್ ಕಪೂರ್ ಪತಿ ರಾಜಾ ಮೃತದೇಹ ಪತ್ತೆಯಾಯಿತು. ದಾಂಪತ್ಯಕ್ಕೆ ಕಾಲಿಟ್ಟ ಒಂದು ವಾರದಲ್ಲೇ ಪುತ್ರನನ್ನು ಬಲಿ ಪಡೆದ ಪಾಪಿ ಸೊಸೆಯ ಕುತಂತ್ರಗಳನ್ನು ನೆನೆದು ರಾಜಾ ರಘುವಂಶಿ ಹೆತ್ತವರು ಕಣ್ಣೀರಿಟ್ಟಿದ್ದಾರೆ. ಪ್ರಸ್ತುತ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಸೋನಮ್ ಕುರಿತು ರಾಜಾ ತಂದೆ ಸ್ಫೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
"ಆರೋಪಿ ಸೋನಮ್ ತಂತ್ರ-ಮಂತ್ರಗಳನ್ನು ಗಾಢವಾಗಿ ನಂಬಿದ್ದಳು. ಮಾಟ-ಮಂತ್ರದ ಮೊರೆ ಹೋಗುತ್ತಿದ್ದ ಆಕೆ, ಅದನ್ನೇ ನನ್ನ ಮಗನ ಮೇಲೂ ಪ್ರಯೋಗಿಸಿದ್ದಳು. ಪತ್ನಿ ಹೇಳಿದಳು ಎಂದು ರಾಜಾ, ನಮ್ಮ ಮನೆಯ ಮುಂಬಾಗಿಲಿನಲ್ಲಿ ಯಾವುದೋ ದಾರದ ಉಂಡೆಯನ್ನು ಕಟ್ಟಿದ್ದ. ಇದನ್ನು ನಾವು ಪ್ರಶ್ನಿಸಿದೆವು. ಅದಕ್ಕೆ, 'ಇಲ್ಲ ಇದು ನಮ್ಮ ಮನೆಗೆ ಯಾವುದೇ ಕೆಟ್ಟ ಕಣ್ಣುಗಳು ಬೀಳಬಾರದು ಎಂದು ಹಾಕಲಾಗಿದೆ' ಎಂದು ಪತ್ನಿ ಹೇಳಿರುವುದಾಗಿ ರಾಜಾ ನಮ್ಮ ಬಳಿ ಹೇಳಿದ್ದ" ಎಂದು ಮೃತನ ತಂದೆ ಆರೋಪಿಸಿದ್ದಾರೆ.
"ಪುತ್ರನ ಕೊಲೆಯಾದ ಬಳಿಕ ರಾಜಾ ಮನೆಯ ಮುಂಬಾಗಿಲಿನಲ್ಲಿ ಕಟ್ಟಿದ್ದ ದಾರದ ಉಂಡೆ ನಾಪತ್ತೆಯಾಗಿದೆ. ನಮ್ಮ ಮಗನನ್ನು ಬಲಿ ಪಡೆದ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಅವರನ್ನು ಗಲ್ಲಿಗೇರಿಸಿ" ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).
ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಗಿದೆ. ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿದೆ,(ಏಜೆನ್ಸೀಸ್).