ನ್ಯೂಸ್

ವಯಸ್ಸಾದಂತೆ ಕಾಣುತ್ತೇನೆಂದು ನನ್ನನ್ನು ರಿಜೆಕ್ಟ್​ ಮಾಡಿದ್ರು; ಆ ನಟನಿಗೆ ಧನ್ಯವಾದ ಎಂದಿದ್ದೇಕೆ ಸೋನಾಕ್ಷಿ ಸಿನ್ಹಾ | Sonakshi Sinha

ಮುಂಬೈ: ಬಾಲಿವುಡ್​ ನಟ ಶತ್ರುಘ್ನಾ ಸಿನ್ಹಾ ಅವರು ಮಗಳು ಸೋನಾಕ್ಷಿ ಸಿನ್ಹಾ(Sonakshi Sinha) ಸಿನಿಮಾ ಕುಟುಂಬದಿಂದ ಬಂದರು ತಮ್ಮ ವೈಯಕ್ತಿಕ ಪ್ರಯತ್ನದಿಂದ ಚಿತ್ರರಂಗದಲ್ಲಿ ಸ್ಟಾರ್​ಡಮ್​​ ಪಡೆದುಕೊಂಡರು. ಉದ್ಯಮದಲ್ಲಿ ಮಹಿಳೆಯರ ಮೇಲೆ ಯಾವ ರೀತಿಯ ಒತ್ತಡಗಳಿವೆ ಎಂದು ಕೇಳಲಾದ ಪ್ರಶ್ನೆಗೆ ಸೋನಾಕ್ಷಿ ಮುಕ್ತವಾಗಿ ಉತ್ತರಿಸಿದ್ದಾರೆ. ತಮಗಾದ ಕೆಟ್ಟ ಅನುಭವವನ್ನು ತಿಳಿಸಿದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಸೋನಾಕ್ಷಿ ಸಿನ್ಹಾ, ಒಮ್ಮೆ ಒಬ್ಬ ನಟ ತನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದ್ದಾಗಿ ಹೇಳಿದರು. ಅವಳು ತನಗಿಂತ ವಯಸ್ಸಾದವಳಂತೆ ಕಾಣುತ್ತಾಳೆ ಎಂಬುದು ಅವರ ಕಾರಣವಾಗಿತ್ತು. ಆ ರೀತಿ ಹೇಳಿದ ನಟನ ಹೆಸರನ್ನು ಸೋನಾಕ್ಷಿ ಬಹಿರಂಗಪಡಿಸಲಿಲ್ಲ. ಆದರೆ ಸೋನಾಕ್ಷಿಯನ್ನು ನಿರಾಕರಿಸಿದ ನಟ ಆಕೆಗಿಂತ ಹಲವಾರು ವರ್ಷ ಹಿರಿಯರಾಗಿದ್ದರು. ಇಂಡಸ್ಟ್ರಿಯಲ್ಲಿ ಪುರುಷರು ತಮ್ಮ ವಯಸ್ಸಿನ ಕಾರಣದಿಂದ ಈ ರೀತಿ ಮುಜುಗರಕ್ಕೊಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಅಗತ್ಯವಿಲ್ಲ. ಏಕೆಂದರೆ ಅಂತಹ ಜನರೊಂದಿಗೆ ಕೆಲಸ ಮಾಡಲು ನನಗೆ ಆಸಕ್ತಿ ಇಲ್ಲ. ಅವರೊಂದಿಗೆ ನಟಿಸದಿರುವುದು ನನ್ನ ಅದೃಷ್ಟ ಎಂದು ನಾನು ಪರಿಗಣಿಸುತ್ತೇನೆ ಎಂದು ಹೇಳಿದರು. ಇಂಡಸ್ಟ್ರಿಯಲ್ಲಿ ಹೀರೋಗಳಿಂದ ಅಂತಹ ಯಾವುದೇ ನಿರೀಕ್ಷೆಗಳಿಲ್ಲ ಎಂಬುದು ತುಂಬಾ ಸ್ಪಷ್ಟವಾಗಿದೆ. ಆದರೆ ಅವರು ತಮ್ಮ ವಯಸ್ಸಿಗೆ ಮುಜುಗರವನ್ನು ಎದುರಿಸಬೇಕಾಗಿಲ್ಲ ಎಂದು ಹೇಳಿದರು.

ನಟನು ತನಗಿಂತ 30 ವರ್ಷ ಕಿರಿಯವಳಾದ ನಟಿಯೊಂದಿಗೆ ರೊಮ್ಯಾನ್ಸ್​​ ಮಾಡುವಾಗ ಆತ ತನ್ನ ವಯಸ್ಸಿನ ಬಗ್ಗೆ ನಾಚಿಕೆಪಡುವುದಿಲ್ಲ. ಅವರ ದೇಹ ಪ್ರಕಾರದ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದೇ ಸಮಯದಲ್ಲಿ ಮಹಿಳೆಯರು ಇದರ ಭಾರವನ್ನು ಹೊರಬೇಕಾಗುತ್ತದೆ. ಈ ವ್ಯತ್ಯಾಸ ಉದ್ಯಮದಲ್ಲಿ ಮಹಿಳೆಯರ ಮೇಲೆ ಯಾವ ರೀತಿ ಒತ್ತಡ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ನಾನು ವಯಸ್ಸಾದಂತೆ ಕಾಣುತ್ತೇನೆ ಎಂದು ಹೇಳಿದ ನಟನಿಗೆ ಹೇ.. ನಾನು ನಿಮಗಿಂತ 5-6 ವರ್ಷ ಚಿಕ್ಕವಳು ಎಂದು ತಮಾಷೆಯಾಗಿ ಹೇಳಿದ್ದಾಗೆ ಸೋನಾಕ್ಷಿ ತಿಳಿಸಿದರು. ನಾವೆಲ್ಲರೂ ಕಲಾವಿದರು ಹೀರೋಯಿನ್‌ಗಳಿಗೆ ಇಷ್ಟು ಕಷ್ಟ ಆಗಬಾರದು ಎಂದು ಹೇಳಿದರು. ನಟಿ ಸೋನಾಕ್ಷಿ ಸಿನ್ಹಾ ಜೂನ್ 23 ರಂದು ಜಹೀರ್ ಇಕ್ಬಾಲ್ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.(ಏಜೆನ್ಸೀಸ್​​)