ನ್ಯೂಸ್

ಅಕ್ಕಿ ಕೊಡದಿದಕ್ಕೆ ಕೊಡಲಿಯಿಂದ ತಾಯಿಯ ಕತ್ತು ಸೀಳಿ ಕೊಂದ ಮಗ!  | Axe

ಒಡಿಸ್ಸಾ: 10 ಕೆಜಿ ಅಕ್ಕಿ ಕೇಳಿದ್ದು ಇದಕ್ಕೆ ತಾಯಿ ನಿರಾಕರಿಸಿದ್ದಾಳೆ ಹೀಗಾಗಿ, ಕುಪಿತಗೊಂಡ ಮಗ ಕೊಡಲಿಯಿಂದ(Axe) ಅಮ್ಮನ ಕತ್ತು ಸೀಳಿ ಕೊಂದಿರುವ ಘಟನೆ ಒಡಿಸ್ಸಾದಲ್ಲಿ ನಡೆದಿದೆ.

ರಾಯ್ಬಾರಿ ಸಿಂಗ್​ ಮೃತೆ ಎಂದು ಗುರುತಿಸಲಾಗಿದೆ. ಆರೋಪಿ ರೋಹಿದಾಸ್​ ಸಿಂಗ್​ನ್ನನ್ನು ಪೋಲಿಸರು ಬಂಧಿಸಿದ್ದಾರೆ. ರೋಹಿದಾಸ್​ ಮತ್ತು ಅತನ ಸಹೋದರ ಲಕ್ಷ್ಮೀದಾಸ್​ ಸಿಂಗ್​​ ನಡುವೆ ಅಕ್ಕಿಗಾಗಿ ಸಣ್ಣ ಮಟ್ಟದಲ್ಲಿ ಗಲಾಟೆಯಾಗಿದೆ. ಇಬ್ಬರು ಮಧ್ಯೆ ಬಂದ ತಾಯಿ ರಾಯ್ಬಾರಿ ಸಿಂಗ್ ಜಗಳು ಬಿಡಿಸಲು ಮುಂದಾಗಿದ್ದಾಳೆ.ಆದರೆ, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಮಧ್ಯೆ ಬಂದ ಅಮ್ಮನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ.

ಅಮ್ಮನನ್ನು ಕೊಂದ ಬಳಿಕ ಆರೋಪಿ ತಾನು ಅದೇ ಆಯುಧದಿಂದ ತನ್ನ ಕತ್ತು ಸಿಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾ​ಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸಂಬಂಧಿತ ವಿಭಾಗದ ಪ್ರಕರಣವನ್ನು ದಾಖಲಿಸಲಾಗಿದೆ.(ಏಜೆನ್ಸೀಸ್​)