ಆಂಧ್ರಪ್ರದೇಶ: ತೃತೀಯಲಿಂಗಿಯನ್ನೇ(Transgender) ಮದುವೆಯಾಗಿವೆ ಎಂದು ಮಗನ ಹಠಕ್ಕೆ ಬೆಸತ್ತ ತಂದೆ-ತಾಯಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ನಂದ್ಯಾಲದ ನಿವಾಸಿಗಳಾದ ಸುಬ್ಬರಾಯುಡು(45) ಮತ್ತು ಪತ್ನಿ ಸರಸ್ವತಿ(38) ಅತ್ಮಹತ್ಯೆ ಮಾಡಿಕೊಂಡ ದಂಪತಿಗಳು ಎಂದು ಗುರುತಿಸಲಾಗಿದೆ. ಇವರ ಪುತ್ರ ಸುನೀಲ್ ಕುಮಾರ್, ತೃತೀಯಲಿಂಗಿ ಸಮುದಾಯದ ಜತೆ ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದ. ಇದರಿಂದ ಅವರು(ತೃತೀಯಲಿಂಗಿ ಸಮುದಾಯ) ಕೊಟ್ಟಿದ್ದ 1.5 ಲಕ್ಷ ರೂ. ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಈ ಹಿನ್ನೆಲೆ ಬೆಸತ್ತ ಪಾಲಕರು ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಂದ್ಯಾಲ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪಿ.ಶ್ರೀನಿವಾಸ್ ರೆಡ್ಡಿ ಹೇಳಿದರು.
ತೃತೀಯಲಿಂಗಿ ಜತೆ ಸಂಬಂಧ ಹೊಂದಿದ್ದ ಸುನಿಲ್ ಕುಮಾರ್, ಅ ಮಹಿಳೆಯೊಂದಿಗೆ ಮದುವೆಯಾಗಲು ತಂದೆ-ತಾಯಿ ನಿರಕಾರಿಸಿದ್ದು. ಈ ವಿಷಯದ ಬಗ್ಗೆ ಮನೆಯಲ್ಲಿ ಅಗಾಗೆ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಈ ಹಿಂದೆ ಇದೇ ವಿಚಾರವಾಗಿ ಸುನಿಲ್ ಅತ್ಮಹತ್ಯೆಗೆ ಯತ್ನಿಸಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಇನ್ನು ತೃತೀಯಲಿಂಗಿ ಸಮುದಾಯದ ಸದಸ್ಯರಿಗೆ ಸೇರಿದ 1.5 ಲಕ್ಷ ರೂ. ಸುನಿಲ್ ಬಳಸಿಕೊಂಡಿದ್ದಾನೆ. ಈ ಹಿನ್ನೆಲೆ ಹಣ ವಾಪಸ್ ಕೊಡುವಂತೆ ಸದಸ್ಯರು ಸುನಿಲ್ ತಂದೆ-ತಾಯಿಗೆ ಎಲ್ಲರ ಎದುರಲ್ಲೆ ಬಹಿರಂಗವಾಗಿ ಕೇಳಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಅವಮಾನಗೊಂಡ ಇತನ ಪಾಲಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).