ಲಖನೌ: ಅತ್ತೆಯ ಜತೆಗೆ ಅಳಿಯ ಓಡಿಹೋಗಿರುವ ಮುಜುಗರದ ಘಟನೆ ಉತ್ತರ ಪ್ರದೇಶದ ಲಖನೌದ ರಹೀಮಾಬಾದ್ನಲ್ಲಿ ನಡೆದಿದೆ.
ಇದನ್ನೂ ಓದಿ: ಉಲ್ಟಾ ಹೊಡೆದ ನಳಿನ್ ಕುಮಾರ್ ಕಟೀಲ್; ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವೆಂದು ಸ್ಪಷ್ಟನೆ
ಈ ಕುರಿತು ಹರ್ದೋಯ್ ಜಿಲ್ಲೆಯ ಅಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ರಿತೇಶ್ ಎಂಬುವರು ತನ್ನ ಸೋದರ ಮಾವ ತನ್ನ ತಾಯಿಯನ್ನು ಕರೆದುಕೊಂಡು ಓಡಿಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರ ಹೆಸರನ್ನು ಬಹಿರಂಗಗೊಳಿಸದೇ ಶೋಧನೆ ನಡೆಸುತ್ತಿದ್ದಾರೆ.
ರಹೀಮಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ರಿತೇಶ್ನ ಸೋದರ ಮಾವ ಹತ್ತು ವರ್ಷಗಳ ಹಿಂದೆ ಆತನ ಸಹೋದರಿಯನ್ನು ಮದುವೆಯಾಗಿದ್ದ. ಇವರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಸುಮಾರು ನಾಲ್ಕು ವರ್ಷದ ಮಗನಿದ್ದು, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ರಿತೇಶ್ನ ಸಹೋದರಿ ಎರಡು ವರ್ಷಗಳ ಹಿಂದೆ ಲಖನೌದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಂದಿನಿಂದ ಸೋದರ ಮಾವ ಹಾಗೂ ಆತನ ಮಕ್ಕಳು, ರಿತೇಶ್ ಹಾಗೂ ಆತನ ತಾಯಿ ಜತೆಗೆ ವಾಸಿಸುತ್ತಿದ್ದರು, ಸುಮಾರು ಎರಡು ವರ್ಷಗಳ ಹಿಂದೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಸೋದರಮಾವ ಹಾಗೂ ರಿತೇಶ್ನ ತಾಯಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದರು. ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಬಂದ ಸೋದರ ಮಾವ, ರಿತೇಶ್ನ ತಾಯಿಯೊಂದಿಗೆ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ.(ಏಜೆನ್ಸೀಸ್)