ನ್ಯೂಸ್

ಮಗ, ಸೊಸೆ ಚಪ್ಪಲಿಯಿಂದ ಹೊಡೆಯುತ್ತಿದ್ದರು.. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವೃದ್ಧ! | DeathNote

DeathNote: ಮಗ, ಸೊಸೆ ದೀರ್ಘಾ ಕಾಲದ ಕಿರುಕುಳಕ್ಕೆ ಬೇಸತ್ತ ವೃದ್ಧರೊಬ್ಬರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹರಿಯಾಣದ ಫರಿದಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಫ್ರೆ.22ರಂದು ಈ ಘಟನೆ ನಡೆದಿದ್ದು, 12 ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಆರೋಪಿಗಳ ವಿರುದ್ಧ ಮಾ.5ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರಿದಾಬಾದ್​ ನಿವಾಸಿ ಕುಬೇರ್​ನಾಥ್​ ಶರ್ಮಾ ಮೃತ ವೃದ್ಧ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅವರು ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ನೋವನ್ನು(ಕಿರುಕುಳ) ವಿವರಿಸುವ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ಆತ್ಮಹತ್ಯೆ ಬಳಿಕ, ಮೃತ ವೃದ್ಧ ಕುಬೇರ್​ನಾಥ್​ ಶರ್ಮಾ ಅವರ ಮಗ ಶೈಲೇಂದ್ರಕುಮಾರ್​ ತನ್ನ ತಂದೆಯ ಸಾವಿಗೆ ನಾರೋಗ್ಯವೇ ಕಾರಣ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಸಂದರ್ಭದಲ್ಲಿ ಮೃತನ ಅಂಗಿ ಜೇಬಿನಲ್ಲಿ ಡೆತ್​ನೋಟ್​ ಪತ್ತೆಯಾಗಿದೆ. ಇದನ್ನು ಅಧಿಕಾರಿಗಳು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪತ್ರದಲ್ಲಿ ಏನಿದೆ..?

ಇನ್ನು ಮೃತ ವೃದ್ಧ ಕುಬೇರ್​ನಾಥ್​ ಶರ್ಮಾ ಬರೆದಿರುವ ಎನ್ನಲಾದ ಡೆಟ್​ನೋಟ್​ನಲ್ಲಿ ''ಮಗ ಮತ್ತು ಸೊಸೆ ನನ್ನನ್ನು ಚಪ್ಪಲಿಯಿಂದ ಹೊಡೆದರು. ಬದುಕುವುದಕ್ಕಿಂತ ಸಾಯುವುದು ಉತ್ತಮ. ಇದಕ್ಕೆ ಯಾರೂ ಕಾರಣರಲ್ಲ; ಎಲ್ಲವೂ ದೇವರ ಇಚ್ಛೆ." ಎಂದು ಬರೆದಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು..?

ಫೆಬ್ರವರಿ 22 ರಂದು ಸಂಜೆ 4 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿತು. ಆದರೆ, ಆತ್ಮಹತ್ಯೆ ಪತ್ರ ಬೆಳಕಿಗೆ ಬಂದ ನಂತರ ಪ್ರಕರಣವನ್ನು ಮತ್ತಷ್ಟು ಪರಿಶೀಲಿಸಿದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ. ಅಧಿಕಾರಿಗಳು ಈಗ ಶೈಲೇಶ್ ಕುಮಾರ್ ಶರ್ಮಾ ಮತ್ತು ಆಕಾಂಕ್ಷಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸಂಗ್ರಾಮ್ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್​)