live-in Relationship: ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿದ್ದ ಗೆಳತಿಯೊಬ್ಬಳು ತನ್ನ ಗೆಳಯನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನಜೀಬಾಬಾದ್ನ ಆದರ್ಶನಗರದಲ್ಲಿ ಬೆಳಕಿಗೆ ಬಂದಿದೆ.
ಅಮಿತ್ ಸಾಗರ್(32) ಮೃತ. ಅಮಿತ್ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದನು. ಮೃತನ ತಾಯಿ ಕಾಂತಿದೇವಿ ನೀಡಿದ ದೂರಿನನ್ವಯ ಗೆಳತಿ ಮಮತಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅಮಿತ್ ಸಾಗರ್ ಮತ್ತು ಮಮತಾ ಕಳೆದ ಮೂರು ವರ್ಷಗಳಿಂದ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ಈ ವೇಳೆ ಅಮಿತ್ ಸಾಗರ್ ಹಾಗಾಗ ಕುಡಿದು ಬಂದು ಮಮತಾ ಮೇಲೆ ಹಲ್ಲೆ ಮಾಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲದೆ, ಗೆಳೆಯನನ್ನು ಕೊಲೆ ಮಾಡಿ ಸಹಜ ಮೃತ ಎಂದು ಬಿಂಬಿಸಲು ಆಸ್ಪತ್ರೆಗೆ ಸೇರಿಸಿದ್ದಳು ಎಂದು ನಜೀಬಾಬಾದ್ ಸರ್ಜಲ್ ಇನ್ಸ್ಪೆಕ್ಟರ್ ನಿತೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ.