ಬೆಂಗಳೂರು: ಇತ್ತೀಚಿನ ದಿಗಳಲ್ಲಿ ಸೋಶಿಯಲ್ ಮೀಡಿಯಾ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಕೆಲವೊಮ್ಮೆ ನಾವು ಊಹೆ ಕೂಡಾ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿರುವ ಕಲೆಯನ್ನು ತೋರ್ಪಡಿಸಲು ಸರಿಯಾದ ವೇದಿಕೆ ಸಿಗದೆ ಇದ್ದಾಗ ಸೋಶಿಯಲ್ ಮೀಡಿಯಾ ಪ್ಲಾಟ್ಪಾರ್ಮ್ ನಮಗೆ ಅತ್ಯುನ್ನತ ವೇದಿಕೆಯಾಗಿದೆ. ಹೀಗೆ ಇಲ್ಲೊಬ್ಬರು ಸೋಶಿಯಲ್ ಮೀಡಿಯಾ ಸ್ಟಾರ್ ಸರ್ಕಾರಿ ಕೆಲಸ ಬಿಟ್ಟು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್ 3 ಆರಂಭವಾಗಿದೆ. ಈ ಕಾರ್ಯಕನಿರಂಜನ್ ದೇಶಪಾಂಡೆ ನಿರೂಪಣೆ ಇದೆ. ಸಾಧು ಕೋಕಿಲ್, ಶ್ರುತಿ ಮತ್ತು ಕೋಮಲ್ ನೇತೃತ್ವದಲ್ಲಿ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಒಬ್ಬರು ಸ್ಪರ್ಧಿ ಮಾತ್ರ ಸಖತ್ ಸುದ್ದಿಯಲ್ಲಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಸೈನ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ದೀಕ್ಷಾ ಬ್ರಹ್ಮವಾರ ಕಾಮಿಡಿ ಮಾಡಲು ಈಗ ಕೆಲಸಕ್ಕೆ ಗುಡ್ ಬೈ ಹೇಳಿ ಬಂದಿದ್ದಾರೆ. ಸೋಷಿಯ್ ಮೀಡಿಯಾದಲ್ಲಿ ಕಾಮಿಡಿ ರೀಲ್ಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ದೀಕ್ಷಾ ಶ್ಯಾಮ- ಸುಮಂಗಲ ದಂಪತಿಯ ಪುತ್ರಿ. ಎಂಎಸ್‌ಸಿ - ಬಿಎಡ್ ಪದವೀಧರೆ ಆಗಿರುವ ದೀಕ್ಷಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ರಂಗಭೂಮಿ ಕಲಾವಿದೆಯಾಗಿರುವ ದೀಕ್ಷಾ 70ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಚಿಲ್ಲರ್ ಮಂಜು ಮೆಂಟರ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜೋರ್ ಸೈಂಡ್ ಮಾಡಿದ ವ್ಯಕ್ತಿಗಳನ್ನು ಈ ಸೀಸನ್‌ನಲ್ಲಿ ನೋಡಬಹುದು.