ನ್ಯೂಸ್

ಸಿದ್ದರಾಮನಹುಂಡಿಯಲ್ಲಿ ಸಾಮಾಜಿಕ ನ್ಯಾಯ: ಸಿದ್ದರಾಮಯ್ಯ 15ನೇ ಬಜೆಟ್

3,71,383 ಕೋಟಿ ರೂ. ವೆಚ್ಚ | 3,68,674 ಕೋಟಿ ರೂ. ಸ್ವೀಕೃತಿ

ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಆಯವ್ಯಯವನ್ನು ಶುಕ್ರವಾರ ಮಂಡಿಸಿದ್ದಾರೆ. 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಶೇ.15ಕ್ಕೂ ಹೆಚ್ಚು ಮೊತ್ತವನ್ನು ಮೀಸಲಿಟ್ಟಿದ್ದಾರೆ. ರೈತರು, ಮಹಿಳೆಯರು ಹಾಗೂ ಅಹಿಂದ ವರ್ಗಕ್ಕೆ ಪ್ರಾಶಸ್ಱ ದೊರೆತಿದ್ದರೆ, ಅಭಿವೃದ್ಧಿ ಯೋಜನೆಗಳಿಗೂ ಅನುದಾನದ ಭರವಸೆ ದೊರೆತಿದೆ. ಇನ್ನೆರಡು ವರ್ಷಗಳ ನಂತರದಲ್ಲಿ ರಾಜಸ್ವ ಹೆಚ್ಚುವರಿಯನ್ನು ಸಾಧಿಸುವ ವಿಶ್ವಾಸದೊಂದಿಗೆ ಕಳೆದ ಬಾರಿಯ 3,006 ಕೋಟಿ ರೂ.ಗಳ ಕೊರತೆಯನ್ನು ನೀಗಿ ಈ ಬಾರಿ 3,849 ಕೋಟಿ. ರೂ.ಗಳ ಉಳಿತಾಯ ಬಜೆಟ್ ಮಂಡನೆಯಾಗಿದೆ. ತೆರಿಗೆ ಹೊರೆ ಹಾಕದಿದ್ದರೂ ಅಸಂಘಟಿತ ಕಾರ್ವಿುಕರು, ಅಗ್ನಿಶಾಮಕ ಸಿಬ್ಬಂದಿ, ಸಾರಿಗೆ ವಲಯದ ಕಾರ್ವಿುಕರಿಗಾಗಿ ಆಯಾ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಹೊಸ ಸೆಸ್ ವಿಧಿಸಿ ಅದನ್ನು ಅವರ ಕಲ್ಯಾಣಕ್ಕೆ ವಿನಿಯೋಗಿಸುವುದಾಗಿ ಹೇಳಿದ್ದಾರೆ. ಮಹಿಳೆಯರಲ್ಲಿ ಉದ್ಯಮಶೀಲತೆ ಉತ್ತೇಜನಕ್ಕೆ ಯೋಜನೆಗಳಿವೆ. ರೈತರಿಗಾಗಿ ಸಿರಿಧಾನ್ಯಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ, ಕಿಸಾನ್ ಮಾಲ್ ಘೋಷಿಸಲಾಗಿದೆ. ಯುವಪೀಳಿಗೆಯ ಕೌಶಲಾಭಿವೃದ್ಧಿಗೆ ವಿಶೇಷ ನೀತಿಯೊಂದಿಗೆ ಪ್ರವಾಸೋದ್ಯಮ, ಜವಳಿ ನೀತಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.

1.05 ಲಕ್ಷ ಕೋಟಿ ಸಾಲ: ಬಜೆಟ್​ನ ಆದಾಯದ ಬಾಬ್ತಿನಲ್ಲಿ ಸಾಲದ ಪ್ರಮಾಣವೇ 1,05,246 ಕೋಟಿ ರೂ. ಗಳಾಗಿದೆ. ಕಳೆದ ಬಾರಿ ಪರಿಷ್ಕೃತ ಅಂದಾಜಿನಲ್ಲಿ ಈ ಪ್ರಮಾಣ 85,928 ಕೋಟಿ. ರೂ. ಆಗಿತ್ತು.

ನಮ್ಮ ಮಿಲ್ಲೆಟ್: ? ಸಿರಿಧಾನ್ಯ ಮಾರುಕಟ್ಟೆಗೆ ನಮ್ಮ ಮಿಲ್ಲೆಟ್ ಯೋಜನೆ ? ಸಮಗ್ರ ಕೃಷಿ ಉತ್ತೇಜಿಸುವ ರೈತ ಸಮೃದ್ಧಿ ಯೋಜನೆ ? ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ? ಸಮುದಾಯ ಬೀಜ ಬ್ಯಾಂಕ್ ? ಕೃಷಿಭಾಗ್ಯ ಮುಂದುವರಿಕೆ.

ಹೊಸತೇನು?

ಸಮುದ್ರ ಆಂಬುಲೆನ್ಸ್:  ಮೀನುಗಾರರಿಗಾಗಿ 7 ಕೋಟಿ ರೂ. ವೆಚ್ಚದ ಸಮುದ್ರ ಆಂಬುಲೆನ್ಸ್.

ಮಂಗಳೂರಲ್ಲಿ ಜಲ ಮೆಟ್ರೋ: ಮಂಗಳೂರಿನ ಗುರುಪುರ, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ

ಮನೆ ಬಾಗಿಲಿಗೆ ಪಡಿತರ:  ಅನ್ನ-ಸುವಿಧಾ- 80 ವರ್ಷ ದಾಟಿದ ಹಿರಿಯರ ಮನೆ ಬಾಗಿಲಿಗೆ ಪಡಿತರ

ಸ್ತ್ರೀಯರಿಗೆ ಕೆಫೆ ಸಂಜೀವಿನಿ: ಗ್ರಾಮೀಣ ಮಹಿಳೆಯರಿಗಾಗಿ 50 ಕ್ಯಾಂಟೀನ್, 2500 ಕಾಫಿ ಕಿಯೋಸ್ಕ್

ಸೌರಶಕ್ತಿ ಹೊಂಬೆಳಕು: 50 ಗ್ರಾಪಂಗಳಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಸೋಲಾರ್ ದೀಪ ಅಳವಡಿಕೆ

ಗ್ರಾಪಂಗಳಲ್ಲಿ ಎಣ್ಣೆಗಾಣ: ಗ್ರಾಪಂಗಳಲ್ಲಿ ತಲಾ ಒಂದು ಲಕ್ಷ ರೂ. ನೆರವಿನೊಂದಿಗೆ ಎಣ್ಣೆ ಗಾಣ ಸ್ಥಾಪನೆ

ಅನುವಾದಕ್ಕೆ ಕನ್ನಡ ಕಸ್ತೂರಿ: ಕನ್ನಡ ಭಾಷಾಂತರಕ್ಕಾಗಿ ಯಂತ್ರಾನುವಾದ ತಂತ್ರಾಂಶ.

ಉಪಕರ ಭಾರ :

1) ಗಿಗ್ ಕಾರ್ವಿುಕರ ಕಲ್ಯಾಣಕ್ಕೆ

2) ಆನ್​ಲೈನ್ ವಹಿವಾಟುಗಳ ಮೇಲೆ ಉಪಕರ

3) ಅಗ್ನಿಶಾಮಕ ಇಲಾಖೆ ಕಾರ್ಯಕ್ಷಮತೆ ಹೆಚ್ಚಳಕ್ಕೆ ಬಹುಮಹಡಿ ಕಟ್ಟಡಗಳಿಗೆ ಆಸ್ತಿ ತೆರಿಗೆ ಜತೆ ಶೇ.1 ರ ದರದಲ್ಲಿ ‘ಫೈರ್ ಸೆಸ್’

4) ಕೊಳೆಗೇರಿ ಸೆಸ್ ಪರಿಷ್ಕರಣೆ

ಹೊಸ ನೀತಿಗಳು

1) ಕೌಶಲ ನೀತಿ

2) ಜವಳಿ ನೀತಿ

3) ಪ್ರವಾಸೋದ್ಯಮ ನೀತಿ

4)ಜಿಪಿಎಸ್​ಎಚ್​ಜಿ ನೀತಿ

5)ಗ್ರಾಪಂ. ಆಸ್ತಿ ನಗದೀಕರಣ ನೀತಿ

6)ಪರಿಷ್ಕೃತ ಜಾಹೀರಾತು ನೀತಿ

7)ಪ್ರೀಮಿಯಂ ಎಫ್​ಎಆರ್ ನೀತಿ

8)ಬೆಂಗಳೂರು ಕೆರೆ, ಉದ್ಯಾನ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ

9) ಗ್ರೀನ್ ಹೈಡ್ರೋಜನ್ ನೀತಿ

10)ಹೊಸ ಕೈಗಾರಿಕಾ ನೀತಿ

ನಾವು-ಮನುಜರು - ದ್ವಿಭಾಷಾ ಮಾಧ್ಯಮ: ?? ಶಿಕ್ಷಣ ಸಂಸ್ಥೆಗಳನ್ನು ಸಾಮಾಜಿಕ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾ-ಕೇಂದ್ರಗಳನ್ನಾಗಿ ರೂಪಿಸಲು ‘ನಾವು-ಮನುಜರು’ ಎಂಬ ಹೆಸರಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಾರಕ್ಕೆ ಎರಡು ತಾಸು ವಿಚಾರ-ವಿಮರ್ಶೆ ಮತ್ತು ಸಂವಾದ ಚಟುವಟಿಕೆಗಳಿಗೆ ಅವಕಾಶ ?? 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ?? ಕಲಿಕಾ ಸಾಮರ್ಥ್ಯ ಸುಧಾರಿಸಲು 10 ಕೋಟಿ ರೂ.ಗಳ ಮರು ಸಿಂಚನ ಕಾರ್ಯಕ್ರಮ.

ನೇರ ಪ್ರಸಾರ

1) ಗ್ರಾಪಂ ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳು

2) ನಗರ ಸ್ಥಳೀಯ ಸಂಸ್ಥೆಗಳ ಸಭೆಗಳ ಕಾರ್ಯಕಲಾಪಗಳು

3)ಕೋರ್ಟ್ ಕಲಾಪಗಳ ನೇರ ಪ್ರಸಾರ, ಆಡಳಿತ ಸುಧಾರಣೆಗೆ -ಠಿ;180 ಕೋಟಿ

4)ಎಲ್ಲ ಗ್ರಾಪಂಗಳಲ್ಲಿ ಇ-ಆಫೀಸ್.

ಬ್ಯಾಂಡ್​ ಬೆಂಗಳೂರು

1) ಹೆಬ್ಬಾಳ ಜಂಕ್ಷನ್​ನಲ್ಲಿ ಸುರಂಗ ರಸ್ತೆ

2) ಪೆರಿಫೆರಲ್ ರಿಂಗ್ ರೋಡ್ ಅನ್ನು ಬೆಂಗಳೂರು ಬಿಜಿನೆಸ್ ಕಾರಿಡಾರ್ ಎಂಬ ಪರಿಕಲ್ಪನೆಯಲ್ಲಿ ಅಭಿವೃದ್ಧಿ

3) ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ-ಡೆಕ್ ನಿರ್ಮಾಣ

4) ಬಿಬಿಎಂಪಿ, ಬಿಎಂಆರ್​ಸಿಎಲ್, ಜಲಮಂಡಳಿ, ಬಿಡಿಎ ಬಳಕೆಗೆ ಸೋಲಾರ್ ಪಾರ್ಕ್ ಸ್ಥಾಪನೆ

5) ಬೆಂಗಳೂರು ಹಾಗೂ 10 ಪಾಲಿಕೆಗಳಲ್ಲಿ ಬೆಳಗಿನ ಜಾವ ಒಂದು ಗಂಟೆವರೆಗೆ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಅವಕಾಶ

6) 2000 ಎಕರೆಯಲ್ಲಿ ನಾಲೆಜ್ ಹೆಲ್ತ್ ಕೇರ್ ಇನ್ನೋವೇಷನ್ ಆಂಡ್ ರಿಸರ್ಚ್ ಸಿಟಿ. -ಠಿ;40,000 ಕೋಟಿ ಬಂಡವಾಳ, 80,000 ಉದ್ಯೋಗ