ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ ಹಿರಿಯ ಗಾಯಕಿ ಉಷಾ ಉತ್ತುಪ್ 
ನ್ಯೂಸ್

78ರ ವಯಸ್ಸಿನಲ್ಲೂ ಇಷ್ಟೊಂದು ಎನರ್ಜಿನಾ? ಉಷಾ ಉತ್ತುಪ್ ‘ರಸ್ಪುಟಿನ್’ ಹಾಡಿಗೆ ನೆಟ್ಟಿಗರು ಶಾಕ್! | Usha Uthup Song

Usha Uthup Rasputin Bengaluru: ಹಿರಿಯ ಗಾಯಕಿ ಉಷಾ ಉತ್ತುಪ್ ಅವರು ಬೋನಿ ಎಮ್‌ ಅವರ ದಿಗ್ಗಜ ಡಿಸ್ಕೋ ಟ್ರ್ಯಾಕ್ ‘ರಸ್ಪುಟಿನ್’ ಹಾಡಿಗೆ ನೀಡಿದ ಅದ್ಭುತ ಪ್ರದರ್ಶನದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಸಂಗೀತ ಪ್ರಿಯರನ್ನು ಹಳೆಯ ಡಿಸ್ಕೋ ಯುಗಕ್ಕೆ ಕೊಂಡೊಯ್ದಿದೆ.

ಸದಾ ತಮ್ಮ ಟ್ರೇಡ್‌ಮಾರ್ಕ್ ಸೀರೆ, ದೊಡ್ಡ ಬಿಂದಿ ಹಾಗೂ ವಿಶಿಷ್ಟ ಆಭರಣಗಳ ಧರಿಸುವ 78 ವರ್ಷದ ಉಷಾ ಉತ್ತುಪ್, ತಮ್ಮ ಎಂದಿನ ವಿಶಿಷ್ಟ ಶೈಲಿಯಲ್ಲಿ ವೇದಿಕೆಯನ್ನು ರಂಗೇರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ 'ಉಷಾ ಉತ್ತುಪ್ ಡೈನಮೈಟ್ ಡಿಸ್ಕೋ ಕ್ಲಬ್' ಕಾರ್ಯಕ್ರಮದಲ್ಲಿ ಈ ರೋಮಾಂಚಕ ಕ್ಷಣ ದಾಖಲಾಗಿದೆ. ಕೇವಲ ‘ರಸ್ಪುಟಿನ್’ ಮಾತ್ರವಲ್ಲದೆ, ಅಡೆಲೆಯ ‘ಸ್ಕೈಫಾಲ್’ ಮತ್ತು ಗ್ಲೋರಿಯಾ ಗೇನರ್‌ನ ‘ಐ ವಿಲ್ ಸರ್ವೈವ್’ ಹಾಡುಗಳ ಮೂಲಕವೂ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇಂಟರ್‌ನ್ಯಾಷನಲ್ ಪಾಪ್, ಡಿಸ್ಕೋ ಹಾಗೂ ಕ್ಲಾಸಿಕ್ ಹಾಡುಗಳನ್ನು ಲೀಲಾಜಾಲವಾಗಿ ಹಾಡುವ ಮೂಲಕ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ನಮಗೆ ನಾವೇ ಎಡವಿದರೂ ವಸ್ತುಗಳ ಮೇಲೆ ಯಾಕೆ ಸಿಟ್ಟು? ಇದರ ಹಿಂದೆ ಇದೆ ಅಚ್ಚರಿಯ ಸೈಕಲಾಜಿ | Psychology

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಿರಿಯ ಗಾಯಕಿಯ ಅಧಮ್ಯ ಶಕ್ತಿ ಮತ್ತು ವೇದಿಕೆಯ ಮೇಲಿನ ಉತ್ಸಾಹ ಕಂಡು ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.