ನ್ಯೂಸ್

VIDEO | BBKS10 ಯಾವುದೇ ಶೋ ಆದ್ರೂ ಡ್ರಾಮಾ ಬೇಕು! ಅದನ್ನೇ ಮಾಡ್ತಿದ್ದಾರೆ ಅವರು: ಸ್ನೇಹಿತ್​

ಮೋಹನ್​ ಶೆಟ್ಟಿ

ಬೆಂಗಳೂರು: ​​​ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 11ನೇ ವಾರಕ್ಕೆ ಕಾಲಿಟ್ಟು, 9ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಅನುಭವಗಳನ್ನು ವೀಕ್ಷಕರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡ ಸ್ನೇಹಿತ್​, ಸಂಗೀತಾ ಮತ್ತು ಕಾರ್ತಿಕ್ ಇಬ್ಬರ ನಡುವಿನ ಸಂಬಂಧ ಪ್ರೀತಿನಾ? ಸ್ನೇಹನಾ? ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರಕ್ಕಿಂತ ಮುಂಚಿತವಾಗಿ ನಾನೊಂದು ಸ್ಪಷ್ಟತೆ ಕೊಡ್ತೀನಿ. ಮನೆಯಲ್ಲಿ ನಾನು ವಿನಯ್, ನಮ್ರತಾ ಫ್ರೆಂಡ್ಸ್ ಆಗಿದ್ವಿ, ಆ ಕಡೆ ತನಿಷಾ, ಕಾರ್ತಿಕ್ ಮತ್ತು ಸಂಗೀತಾ ಸ್ನೇಹಿತರಾಗಿದ್ರು. ನಾವು ಕಡೆಯವರೆಗೂ ಒಟ್ಟಿಗೆ ಇದ್ವಿ, ಅವರು ಮಧ್ಯದಲ್ಲಿ ಕಿತ್ತಾಡ್ತಾರೆ ಮತ್ತೇ ಒಂದಾಗ್ತಾರೆ. ಅವರವರು ಫ್ರೆಂಡ್​ಶಿಪ್​ ಹೇಗೆ ನಿಭಾಯಿಸುತ್ತಾರೆ, ಆ ರೀತಿ ಬೇರೆ ಅಷ್ಟೇ" ಎಂದರು.

"ಇಲ್ಲಿ ನಮ್ಮ ಫ್ರೆಂಡ್​ಶಿಪ್​ ಸರಿ-ತಪ್ಪು ಅಂತ ಹೇಳಲು ಆಗೋದಿಲ್ಲ. ಮತ್ತೆ ಕಾರ್ತಿಕ್ ಹಾಗೂ ಸಂಗೀತಾ ಅಂತ ವಿಷಯ ಬಂದಾಗ, ಅವರಿಬ್ಬರ ಮಧ್ಯೆ ಏನಿದೆಯೋ ಅದು....." ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕೆಳಗಿದೆ ವೀಕ್ಷಿಸಿ.