ನ್ಯೂಸ್

ಮಗುವಿನ ಡೈಪರ್​ ಕೂಡ ಬಿಡದ ಖತರ್ನಾಕ್​ ಕಿಲಾಡಿ! ಮಂಗಳೂರಿನಲ್ಲಿ ಚಿನ್ನದ ಸ್ಮಗ್ಲರ್​ ಸೆರೆ…

ಮಂಗಳೂರು: ಅಂತರಾಷ್ಟ್ರೀಯ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕ ಸ್ಮಗ್ಲರ್​ನೊಬ್ಬ ತನ್ನ 21 ತಿಂಗಳ ಮಗಳ ಡೈಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಸಿಕ್ಕಿಬಿದ್ದಿದ್ದಾನೆ ಎಂದು ಕಸ್ಟಮ್ಸ್ ಪ್ರಕಟಣೆ ಶನಿವಾರ ತಿಳಿಸಿದೆ.

ಪೇಸ್ಟ್ ರೂಪದಲ್ಲಿ ಚಿನ್ನವನ್ನು ಡಯಾಪರ್ ಒಳಗೆ ಚೀಲಗಳಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಅದು ಮಗುವಿನ ಮಲ ಎಂದು ಅಧಿಕಾರಿಗಳು ಅಂದುಕೊಳ್ಳುತ್ತಾರೆ ಎಂದು ಭಾವಿಸಿದ್ದ ಎಂದು ಕಾಣುತ್ತದೆ. ಆದರೆ, ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ವಿಚಿತ್ರ ವಿಧಾನ ಪತ್ತೆಯಾಗಿದೆ.

ಇನ್ನೊಂದು ಘಟನೆಯಲ್ಲಿ ಪುರುಷ ಪ್ರಯಾಣಿಕನೊಬ್ಬ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು ತನ್ನ ಸೊಂಟಕ್ಕೆ ಬೆಲ್ಟ್‌ನಂತೆ ಕಟ್ಟಿಕೊಂಡಿದ್ದ. ಇನ್ನೊಬ್ಬ ವ್ಯಕ್ತಿ ತನ್ನ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದ.

ಒಟ್ಟಾರೆಯಾಗಿ, ಎಂಐಎಯ ಕಸ್ಟಮ್ಸ್ ಅಧಿಕಾರಿಗಳು ಈ ವರ್ಷದ ಮಾರ್ಚ್ 1 ರಿಂದ 15 ರವರೆಗೆ 90.67 ಲಕ್ಷ ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. (ಏಜೆನ್ಸೀಸ್)