ನ್ಯೂಸ್

ಗುಂಡಿನ ದಾಳಿಗೆ ಒಳಗಾಗಿದ್ದ ಸ್ಲೋವಾಕಿಯಾದ ಪ್ರಧಾನಿ ಫಿಕೋ ಸ್ಥಿತಿ ಸ್ಥಿರ

ಸ್ಲೋವಾಕಿಯಾ: ಐರೋಪ್ಯ ಒಕ್ಕೂಟ ಸ್ಲೋವಾಕಿಯಾದ ಪ್ರಧಾನ ಮಂತ್ರಿ ರಾಬರ್ಟ್‌ ಫಿಕೋ ಅವರ ಮೇಲೆ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಹ್ಯಾಂಡ್ಲೋವಾ ನಗರದಲ್ಲಿ ಕ್ಯಾಬಿನೆಟ್ ಸಭೆಯ ನಂತರ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಗುಂಡು ಹಾರಿಸಲಾಗಿದ್ದು, ಕುಸಿದು ಬಿದ್ದ ಅವರನ್ನು ಕೂಡಲೇ ಅವರ ಅಂಗರಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ರಷ್ಯಾ ಪರ ನಿಲುವು ಹೊಂದಿರುವ ಫಿಕೋ ಅವರ ಮೇಲೆ ಹಲವಾರು ಬಾರಿ ಗುಂಡು ಹಾರಿಸಲಾಗಿತ್ತು. ಆದರೆ ಅವರು ಪಾರಾಗುತ್ತಲೇ ಬಂದಿದ್ದರು.

ಗುಂಡಿನ ದಾಳಿ ನಡೆದಾಗ ರಾಜಧಾನಿ ಪ್ರೇಗ್‍ನಿಂದ ಈಶಾನ್ಯಕ್ಕೆ 140 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಫಿಕೋ ತನ್ನ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದರು. ಆಗ ಪ್ರತ್ಯಕ್ಷನಾದ ದುಷ್ಕರ್ಮಿ ಪ್ರಧಾನಿ ಫಿಕೋ ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.

ಗುಂಡು ಹಾರಿಸಿದ ದುಷ್ಕರ್ಮಿಯನ್ನು ತಕ್ಷಣ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.