ಉತ್ತರ ಪ್ರದೇಶ: ಇಲ್ಲಿನ ಕನ್ನೌಜ್ ಜಿಲ್ಲೆಯ ಔರಯಾ ಗಡಿಯ ಸಮೀಪದ ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಶುಕ್ರವಾರ(ಡಿ.06) ಸ್ಲೀಪರ್(Sleeper Bus) ಬಸ್ ಮತ್ತು ಟ್ರಕ್ ನಡುವೆ ಸಂಭಂವಿಸಿದ ಅಫಘಾತದಲ್ಲಿ 8 ಜನರು ಮೃತಪಟ್ಟಿದ್ದು, 19ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದಿಂದ ದೆಹಲಿಗೆ 40 ಪ್ರಯಾಣಿಕರನ್ನು ಹೊತ್ತು ಹೊರಡುತ್ತಿದ್ದ ಸ್ಲೀಪರ್ ಬಸ್ ಮುಂಜಾನೆ 4.30ರ ಸುಮಾರಿಗೆ ಭಾರಿ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪೊಲೀಸ್ ತಂಡ ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಸೈಫಾಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಇದೇ ಹೆದ್ದಾರಿಯ ಮೂಲಕ ಸಾಗುತ್ತಿದ್ದ ಜಲಸಂಪನ್ಮೂಲ ಸಚಿವ ಸ್ವತಂತ್ರ ದೇವ್ ಸಿಂಗ್ ಕೂಡ ಕಾರಿನಿಂದ ಇಳಿದು ಸಹಾಯ ಮಾಡಿದರು ಎಂದು ವರದಿಗಳು ಉಲ್ಲೇಖಿಸಿವೆ.
ಈ ಘಟನೆಯೂ ಯಾವ ಕಾಣಕ್ಕೆ ಸಂಭಂವಿಸಿದೆ ಎಂದು ತನಿಖೆ ಮಾಡಲಾಗುವುದು ಎಂದು ವರದಿಯಾಗಿದೆ,(ಏಜೆನ್ಸೀಸ್).