ನ್ಯೂಸ್

ಆರು ಗ್ರಹಗಳು ಒಂದೇ ರಾಶಿಯಲ್ಲಿ!

ಮೋಹನ್​ ಶೆಟ್ಟಿ

| ಡಾ.ಪ್ರಸನ್ನಾಚಾರ್ಯ ಎಸ್. ಕಟ್ಟಿ, (ಲೇಖಕರು ಖ್ಯಾತ ಜ್ಯೋತಿಷಿ, ವೇದ-ವೇದಾಂತ ವಿದ್ವಾಂಸರು)

ಹಿಂದೂಧರ್ಮದ ಜ್ಞಾನ ಪರಂಪರೆಯಲ್ಲಿ ಋಷಿಗಳು, ಸಾಧಕರು, ಸತ್ಪುರುಷರು, ಮೇಧಾವಿಗಳು ಜ್ಯೋತಿಷ್ಯ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ತಮ್ಮ ಇಡೀ ಜೀವನವನ್ನು ಗ್ರಹಗಳ ಚಲನೆ, ಪ್ರಕೃತಿಯ ವ್ಯತ್ಯಾಸ, ವಾತಾವರಣದ ಬದಲಾವಣೆ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ನಿರಂತರವಾಗಿ ಗಮನಿಸಿ ಅಧ್ಯಯನ ಮಾಡಿದ್ದಾರೆ. ಆ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದಲ್ಲಿ ತ್ರಿಗ್ರಹಯೋಗ, ಚತುರ್ಗ್ರಹಯೋಗ, ಪಂಚಗ್ರಹಯೋಗ, ಷಡ್ಗ್ರಹಯೋಗ, ಅಷ್ಟಗ್ರಹ ಕೂಟ ಇತ್ಯಾದಿಗಳನ್ನು ವಿಶೇಷವಾಗಿ ವಿವರಿಸಲಾಗಿದೆ.

ಏನಿದು ಷಡ್ಗ್ರಹಯೋಗ?: ಷಡ್ಗ›ಹಯೋಗ ( ಷಡ್ಗ್ರಹಯುತಿ) ಎಂದರೆ ಆರು ಗ್ರಹಗಳು ಒಂದೇ ರಾಶಿಯಲ್ಲಿ ಸೇರುವ ಘಟನೆ. ಈ ಯೋಗ ಯಾವ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದರ ಆಧಾರದ ಮೇಲೆ ಅದರ ಪ್ರಭಾವವನ್ನು ವಿಶ್ಲೇಷಿಸಲಾಗುತ್ತದೆ. ಸಾಮಾನ್ಯವಾಗಿ, ಈ ಯೋಗವು ಭಾರೀ ಸಂಜಾತ ಅಥವಾ ವಿಪ್ಲವಕಾಲಕ್ಕೆ ಇಣುಕುವ ಸೂಚನೆಯನ್ನು ನೀಡುತ್ತದೆ.

ಇತಿಹಾಸದಲ್ಲಿ ಗ್ರಹಯುತಿ ಯೋಗಗಳ ಪರಿಣಾಮಗಳು: 1939ರ ಏಪ್ರಿಲ್ 20: ಮೀನ ಮತ್ತು ಮೇಷ ರಾಶಿಗಳಲ್ಲಿ ಚತುರ್ಗ್ರಹ ಹಾಗೂ ತ್ರಿಗ್ರಹಯುತಿ ಉಂಟಾಗಿ ಕೆಲವೇ ತಿಂಗಳೊಳಗೆ ದ್ವಿತೀಯ ವಿಶ್ವಯುದ್ಧ ಪ್ರಾರಂಭವಾಯಿತು.

1947ರ ಆಗಸ್ಟ್ 14-15: ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಮಯದಲ್ಲಿ ಪಂಚಗ್ರಹಯೋಗ ಕರ್ಕರಾಶಿಯಲ್ಲಿ ಇತ್ತು. ಇದರಿಂದಾಗಿ ಭಾರತ ವಿಭಜನೆಯಾಗಿದ್ದು, ಅಪಾರ ಹಾನಿ, ಮಾರಣಹೋಮಗಳು, ಹತ್ಯಾಕಾಂಡಗಳು, ಯುದ್ಧಗಳು ಸಂಭವಿಸಿದವು.

2019ರ ಡಿಸೆಂಬರ್ 25: ಪಂಚಗ್ರಹಯೋಗದ ಸಂದರ್ಭದಲ್ಲಿ ಡಿಸೆಂಬರ್ 31ರಂದು ಕೋವಿಡ್-19 ವೈರಸ್ ಚೀನಾದ ವುಹಾನ್​ನಲ್ಲಿ ಹರಡಿತು. ಇದರ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಿತು.

ಈ ಸಲದ ಷಡ್ಗ್ರಹಯೋಗ ಪರಿಣಾಮಗಳು: ಪ್ರಸಕ್ತ ವರ್ಷದ ಫಾಲ್ಗುಣ ಮಾಸ ಅಮಾವಾಸ್ಯೆ ಅಂದರೆ 2025ರ ಮಾರ್ಚ್ 29ರ ಬೆಳಗ್ಗೆ 5.25ಕ್ಕೆ ಶನಿ ಗ್ರಹವು ಕುಂಭರಾಶಿಯಿಂದ ಮೀನರಾಶಿಗೆ ಪ್ರವೇಶ ಮಾಡಲಿದೆ.

ಈ ಯೋಗದಿಂದ ಯಾವ ರಾಶಿಗಳ ಮೇಲೆ ಏನು ಪರಿಣಾಮ?

  • ಮೇಷ: ಶನಿ ಸಾಡೇಸಾತಿ ಪ್ರಾರಂಭ
  • ಧನು: ಅರ್ಧಾಷ್ಟಮ ಶನಿ ಪ್ರಾರಂಭ
  • ಮಕರ: ಅಂತ್ಯಶನಿ
  • ಮೀನ: ಜನ್ಮಶನಿ

ಮೀನ, ಮೇಷ, ಸಿಂಹ, ಧನು ರಾಶಿಗಳ ಮೇಲೆ ಈ ಯೋಗದ ಪರಿಣಾಮ ಅತ್ಯಧಿಕವಾಗಿರಲಿದೆ. ಪ್ರಾಚೀನ ವರಾಹಮಿಹಿರಾಚಾರ್ಯ ಸಂಹಿತೆಯಲ್ಲಿ ಗೋಚಾರ ಫಲಗಳನ್ನು ವಿವರಿಸಿದ್ದು, ಈ ಬಾರಿ ಮೀನ, ಮೇಷ, ಸಿಂಹ, ಧನು ರಾಶಿಗಳ ಮೇಲೆ ವಿಶೇಷ ಪರಿಣಾಮವಿದೆ. ದ್ವಾದಶ ರಾಶಿಗಳು ಮೇಲೆ ಷಡ್ಗ್ರಹಯೋಗ ಗ್ರಹ ಫಲಗಳು ಇಂತಿವೆ.

  • ಸೂರ್ಯ (ರವಿಃ) ಫಲಗಳು
  • ಜನ್ಮಸ್ಥ ಸೂರ್ಯ: ದೇಹಾಯಾಸ, ವೈಭವ ನಾಶ, ರೋಗ
  • ಚತುರ್ಥ ಸೂರ್ಯ: ಸ್ತ್ರೀಸುಖದಲ್ಲಿ ವಿಘ್ನ, ಅಸ್ವಸ್ಥತೆ
  • ಅಷ್ಟಮ ಸೂರ್ಯ: ಸ್ತ್ರೀ ವಿಯೋಗ, ರಾಜಭೀತಿ, ರೋಗಪೀಡೆ
  • ದ್ವಾದಶ ಸೂರ್ಯ: ಅಪಜಯ, ವಾಣಿಜ್ಯ ನಷ್ಟ
  • ಚಂದ್ರನ ಫಲಗಳು-
  • ಜನ್ಮಸ್ಥ ಚಂದ್ರ: ಮೃಷ್ಟಾನ್ನ ಭೋಜನ, ಸುಖ, ಆದರೆ ಪಾಪಗ್ರಹ ಯುತಿ ದೋಷ
  • ಚತುರ್ಥ ಚಂದ್ರ: ಭಯಪ್ರಾಪ್ತಿ
  • ಅಷ್ಟಮ ಚಂದ್ರ: ಅಗ್ನಿಭಯ
  • ದ್ವಾದಶ ಚಂದ್ರ: ದೋಷ ಪ್ರಾಪ್ತಿ, ಧನ ಅಪವ್ಯಯ ಬುಧನ ಫಲಗಳು-
  • ಜನ್ಮಸ್ಥ ಬುಧ: ಬಂಧುಗಳ ಜಗಳ, ದುರ್ವಾಕ್ಯ, ಧನನಷ್ಟ
  • ಚತುರ್ಥ ಬುಧ: ಕುಟುಂಬ ಸುಖ, ಧನಲಾಭ
  • ಅಷ್ಟಮ ಬುಧ: ಪುತ್ರಲಾಭ, ವಸ್ತ್ರಲಾಭ
  • ದ್ವಾದಶ ಬುಧ: ಶತ್ರುಗಳಿಂದ ಕಷ್ಟ, ರೋಗ ಪೀಡೆ

ಶುಕ್ರನ ಫಲಗಳು -

  • ಜನ್ಮಸ್ಥ ಶುಕ್ರ: ಸುಗಂಧ ವಸ್ತು, ಭೋಜನ ಸುಖ, ಆದರೆ ರಾಹುಯುತಿ ದೋಷ
  • ಚತುರ್ಥ ಶುಕ್ರ: ಬಂಧುಗಳಿಂದ ಸಹಾಯ, ಐಶ್ವರ್ಯ ವೃದ್ಧಿ
  • ಅಷ್ಟಮ ಶುಕ್ರ: ರತ್ನ, ವಸ್ತ್ರಲಾಭ
  • ದ್ವಾದಶ ಶುಕ್ರ: ಹಣ, ವಸ್ತ್ರ, ಆಭರಣ ಲಾಭ
  • ಶನಿಯ ಫಲಗಳು
  • ಜನ್ಮಸ್ಥ ಶನಿ: ದೇಶತ್ಯಾಗ, ಸ್ವಜನ ವಿರಹ, ದುಃಖ ಪರಂಪರೆ
  • ಚತುರ್ಥ ಶನಿ: ಕುಟುಂಬ ಕಲಹ, ಧನನಷ್ಟ
  • ಅಷ್ಟಮ ಶನಿ: ದೀನಸ್ಥಿತಿ, ಮಾನಸಿಕ ಹಿಂಸೆ
  • ದ್ವಾದಶ ಶನಿ: ನಿರಂತರ ಕಷ್ಟಗಳು, ಮಾನಹಾನಿ, ವೈಫಲ್ಯ

ರಾಹು ಫಲಗಳು -

  • ಜನ್ಮಸ್ಥ ರಾಹು: ನಿರಂತರ ಹಾನಿ
  • ಚತುರ್ಥ ರಾಹು: ಶೋಕ ಪ್ರಾಪ್ತಿ
  • ಅಷ್ಟಮ ರಾಹು: ಅನಾರೋಗ್ಯ, ರೋಗಪೀಡೆ
  • ದ್ವಾದಶ ರಾಹು: ದುಃಖ, ಕಠಿಣ ಪರಿಸ್ಥಿತಿ

ಷಡ್ಗ್ರಹಯೋಗ ಪರಿಹಾರಗಳು

1. ಶಾಂತಿ ಹೋಮ ಮತ್ತು ಪಾರಾಯಣ:

  • ವಿಷ್ಣು ಸಹಸ್ರನಾಮ ಪಾರಾಯಣ ?ಶನೈಶ್ಚರ ಕೃತ ನರಸಿಂಹ ಸ್ತುತಿ ?ದುರ್ಗಾ ಸಪ್ತಶತಿ ಪಾರಾಯಣ ?ರುದ್ರಾಭಿಷೇಕ, ಶಿವಾಷ್ಟೋತ್ತರ ಪಾರಾಯಣ
  • ಮೃತ್ಯುಂಜಯ ಜಪ

2. ದಾನ: ? ನವಗ್ರಹ ಧಾನ್ಯ ? ಎಳ್ಳು, ಎಳ್ಳೆಣ್ಣೆ, ಕಬ್ಬಿಣದ ಪಾತ್ರೆ ? ನವಗ್ರಹ ವಸ್ತ್ರ ? ಅನ್ನದಾನ 3. ವಿಶೇಷ ಆರಾಧನೆ: ಶನಿ, ಹನುಮಂತ, ದುರ್ಗೆ, ನರಸಿಂಹ ದೇವರ ಪೂಜೆ ? ಪ್ರದಕ್ಷಿಣೆ, ನೈವೇದ್ಯ ಸೇವೆ ? ಕುಲದೇವರ ಆರಾಧನೆ

ವಿಶೇಷವಾದ ಪರಿಹಾರಗಳು

1) ಷಡ್ಗ್ರಹಯೋಗ ಶಾಂತಿ

2) ಸಂಪೂರ್ಣ ನವಗ್ರಹ ಹೋಮ

3) ನರಸಿಂಹ ಮಂತ್ರ ದುರ್ಗಾ ಮಂತ್ರ ಹೋಮ

4) ಶನಿ ಶಾಂತಿ

4. ಮೀನ ಹಾಗೂ ಸಿಂಹ ರಾಶಿಯವರಿಗೆ ವಿಶೇಷ ಜಾಗ್ರತೆ:

ಮೀನರಾಶಿ: ಜನ್ಮ ಶನಿಯ ಪರಿಣಾಮ ಎರಡೂವರೆ ವರ್ಷ. ಸಿಂಹರಾಶಿ: ಅಷ್ಟಮ ಶನಿಯ ಪರಿಣಾಮ ಎರಡು ವರ್ಷ. ಹೀಗಾಗಿ, ಈ ಷಡ್ಗ›ಹಯೋಗದ ದುಷ್ಪ್ರಭಾವ ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಭಯ ಬೇಡ ಎಚ್ಚರಿಕೆ ಇರಲಿ. ಧರ್ಮಕಾರ್ಯಗಳಿಂದ ಪುಣ್ಯ ಸಂಪಾದನೆ ಮಾಡಿ. ಮಂತ್ರಸಿದ್ಧಿಗೆ ಅತ್ಯುತ್ತಮ ಕಾಲ.