ನವದೆಹಲಿ : ಇಂದಿನ ರಾಜ್ಯಸಭಾ ಕಲಾಪದ ನಡುವೆ ಫಲಕಗಳನ್ನು ಹಿಡಿದು ಸದನದ ಬಾವಿಗೆ ನುಗ್ಗಿದ ಆರು ಜನ ಸಂಸದರಿಗೆ ಕಲಾಪದಿಂದ ಹೊರಗುಳಿಯುವಂತೆ ಆದೇಶಿಸಲಾಯಿತು. ಈ ಆರು ಸಂಸದರೆಂದರೆ ತೃಣಮೂಲ ಕಾಂಗ್ರೆಸ್ನ ಡೋಲ ಸೇನ್, ನದೀಮುಲ್ ಹಕ್, ಅರ್ಪಿತ ಘೋಷ್, ಮೌಸಮ್ ನೂರ್, ಶಾಂತಾ ಛೆಟ್ರಿ ಮತ್ತು ಅಬೀರ್ ರಂಜನ್ ಬಿಸ್ವಾಸ್.
ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡದ್ದಕ್ಕಾಗಿ ಈ ಸಂಸದರಿಗೆ ಸದನದಿಂದ ಹೊರಹೋಗಲು ಮತ್ತು ದಿನದ ಉಳಿದ ಕಲಾಪದಲ್ಲಿ ಪಾಲ್ಗೊಳ್ಳದಿರಲು, ರಾಜ್ಯಸಭಾ ಚೇರ್ಮನ್ ಎಂ.ವೆಂಕಯ್ಯ ನಾಯ್ಡು ಸೂಚಿಸಿದರು ಎನ್ನಲಾಗಿದೆ. (ಏಜೆನ್ಸೀಸ್)