ನ್ಯೂಸ್

ಸೂಪರ್ ಸಿಕ್ಸ್ ಶುಕ್ರವಾರ; ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಸಿನಿಮಾಗಳಿವು

ಬೆಂಗಳೂರು: ಈ ವರ್ಷದ 40ನೇ ಶುಕ್ರವಾರವಾದ ಇಂದು ಒಟ್ಟು ಆರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ್ಯಕ್ಷನ್, ಲವ್, ಡ್ರಾಮಾ ಹೀಗೆ ವಿಭಿನ್ನ ಜಾನರ್ ಸಿನಿಮಾಗಳನ್ನು ನೋಡಲು ಇಚ್ಛಿಸುವವರಿಗೆ ಈ ವಾರ ಭರ್ಜರಿ ಆಯ್ಕೆಗಳಿವೆ.

ನೂತನ್ ಉಮೇಶ್ ಆ್ಯಕ್ಷನ್-ಕಟ್ ಹೇಳುತ್ತಿರುವ ವಿನೋದ್ ಪ್ರಭಾಕರ್, ಲೇಖಾಚಂದ್ರ, ಪಾವನ ನಟಿಸಿರುವ ‘ೈಟರ್’, ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಿರುವ ಕೊನೆಯ ಸಿನಿಮಾ, ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಾಜಮಾರ್ತಾಂಡ’ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿವೆ.

ಹಲವು ವರ್ಷಗಳ ಗ್ಯಾಪ್ ಬಳಿಕ ನಿರ್ದೇಶಕ ಪಿ.ಎಚ್ ವಿಶ್ವನಾಥ್ ಆ್ಯಕ್ಷನ್-ಕಟ್ ಹೇಳಿರುವ ಕಾಮಿಡಿ ಸಿನಿಮಾ ‘ಆಡೇ ನಮ್ ಗಾಡು’, ನಾಗೇಂದ್ರ ಗಾಣಿಗ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಪ್ರೇಮ ಕಥಾಹಂದರ ಹೊಂದಿರುವ ಚಿತ್ರ ‘ಅಭಿರಾಮಚಂದ್ರ’, ಮಹೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ವೃಷಾ ಪಾಟೀಲ್ ಹಾಗೂ ಪ್ರಜಯ್ ಅಭಿನಯಿಸಿರುವ ‘ಲವ್', ಎ. ಸುಬ್ರಮಣಿ ನಿರ್ದೇಶನದ ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’ ಈ ವಾರ ರಿಲೀಸ್ ಆಗುತ್ತಿರುವ ಚಿತ್ರಗಳು.