ಸಾಂದರ್ಭಿಕ ಚಿತ್ರ 
ನ್ಯೂಸ್

ಹೃದಯಾಘಾತದಿಂದ ಮೃತಪಟ್ಟ ಅಣ್ಣ, ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ..

ಧೂಳಿಕಟ್ಟಾ: ರಕ್ಷಾ ಬಂಧನವು ಭ್ರಾತೃತ್ವ, ಸಹೋದರತ್ವದ ಸಂಕೇತವಾಗಿದೆ. ಸಹೋದರರ ಪ್ರೇಮವನ್ನು ಸಂಕೇತಿಸುವ ಹಬ್ಬ ಇದಾಗಿದ್ದು, ರಕ್ಷಾ ಬಂಧನ ಬಂದರೆ ಸಾಕು. ಎಷ್ಟೇ ದೂರದಲ್ಲಿದ್ದರೂ ತಮ್ಮ ಒಡಹುಟ್ಟಿದವರ ಬಳಿ ಹೋಗಿ ರಾಖಿ ಕಟ್ಟುತ್ತಾರೆ. ಆದರೆ ತಂಗಿಯೊಬ್ಬಳು ಅಣ್ಣನ ಮೃತದೇಹಕ್ಕೆ ರಾಖಿ ಕಟ್ಟಿರುವ ಹೃದಯ ವಿದ್ರಾವಕ ಘಟನೆ ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟಾ ಗ್ರಾಮದಲ್ಲಿ ನಡೆದಿದೆ.

ಚೆಲ್ಲೆ ಗೌರಮ್ಮ ಎಂಬ ಮಹಿಳೆ ಮಂಗಳವಾರದಂದು ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟಾ ಗ್ರಾಮದ ಚೌಧರಿ ಕನಕಯ್ಯ ಎಂಬ ತನ್ನ ಸಹೋದರನಿಗೆ ರಾಖಿ ಕಟ್ಟಲು ತವರಿಗೆ ಬಂದಿದ್ದಳು. ಪ್ರತಿ ವರ್ಷದಂತೆ. ಬಹಳ ದಿನಗಳ ನಂತರ ತಂಗಿ ಮನೆಗೆ ಬಂದಾಗ ಅಣ್ಣನೂ ಖುಷಿಯಾಗಿದ್ದನು. ಆದರೆ ಇದ್ದಕ್ಕಿದ್ದಂತೆ ತಂಗಿಯ ಜೊತೆ ಖುಷಿಯಿಂದ ಮಾತನಾಡುತ್ತಾ ಆತ ಅಸ್ವಸ್ಥನಾಗಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.



ತುಂಬಾ ಖುಷಿಯಿಂದ ಅಣ್ಣನಿಗೆ ರಾಖಿ ಕಟ್ಟಲು ಬಂದ ತಂಗಿಗೆ ಹೇಳಲಾಗದಷ್ಟು ತೀವ್ರ ದುಃಖವಾಗಿದ್ದು, ಕೊನೆಗೆ ಆಕೆ ಅಣ್ಣನ ಕೈಗೆ ರಾಖಿ ಕಟ್ಟಿ ಪ್ರೀತಿ ವ್ಯಕ್ತಪಡಿಸಿ ಇದೇ ಕೊನೆಯ ರಾಖಿ ಎಂದು ಅಳಲು ತೋಡಿಕೊಂಡಿದ್ದಾಳೆ. ಅಣ್ಣ ತಂಗಿಯ ನಡುವಿನ ವಾತ್ಸಲ್ಯ ನೋಡಿದವರೆಲ್ಲ ಕಣ್ಣೀರು ಸುರಿಸಿದ್ದು, ಯಾವ ಸಹೋದರಿಯೂ ಇಂತಹ ಸಂಕಷ್ಟಕ್ಕೆ ಸಿಲುಕಬಾರದು ಎಂದಿದ್ದಾರೆ.(ಏಜೆನ್ಸೀಸ್)