ನ್ಯೂಸ್

ಸಿಸೋಡಿಯಾ ಸಾಮ್, ದಾಮ್, ದಂಡ್, ಭೇದ್ ಹೇಳಿಕೆ: ಪಂಜಾಬ್‌ನಲ್ಲಿ ಭುಗಿಲೆದ್ದ ಆಕ್ರೋಶ| Manish Sisodia

Manish Sisodia: 2027 ರ ವಿಧಾನಸಭಾ ಚುನಾವಣೆ ಗೆಲ್ಲಲು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಸಾಮ್, ದಾಮ್, ದಂಡ್, ಭೇದ್ ಸೂತ್ರದ ಬಗ್ಗೆ ಪಂಜಾಬ್‌ ರಾಜಕೀಯದಲ್ಲಿ ವಿವಾದ ಭುಗಿಲೆದ್ದಿದೆ.

ನಾವು ಮುಂದಿನ ಬಾರಿ ಪಂಜಾಬ್​ನಲ್ಲಿ ನಡೆಯುವ 2027ರ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಸಾಮ್, ದಾಮ್, ದಂಡ್, ಭೇದದ ಜತೆಗೆ ಸತ್ಯ, ಸುಳ್ಳು, ಪ್ರಶ್ನೆ, ಉತ್ತರ, ಜಗಳದ ಜತೆಗೆ ಏನು ಮಾಡಬೇಕೋ ಎಲ್ಲವನ್ನು ಜೋಶ್​ನಲ್ಲಿ ಮಾಡುತ್ತೇವೆ ಎಂದು ವಿಡಿಯೋದಲ್ಲಿ ಸಿಸೋಡಿಯಾ ಹೇಳುತ್ತಿದ್ದಾರೆ.

ಅಲ್ಲದೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಿದ್ದ ಕಾರ್ಯಕ್ರಮದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪುಲ್​ ವೈರಲ್ ಆಗಿದೆ.

ಸಿಸೋಡಿಯಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಸಿಸೋಡಿಯಾ ಹೇಳಿಕೆ ಬಗ್ಗೆ ಬಿಜೆಪಿಯು, ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು.ಬಿಜೆಪಿಯ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸುನಿಲ್ ಜಾಖಡ್ ಅವರು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಿಸೋಡಿಯಾ ಅವರ ಹೇಳಿಕೆಯು ಎಎಪಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಉದ್ದೇಶಿಸಿದೆ ಎಂದು ಜಾಖಡ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

ಸಿಸೋಡಿಯಾ ಮಾತುಗಳನ್ನು ಖಂಡಿಸಿದ ಜಾಖರ್, ಸಿಸೋಡಿಯಾ ಮಾತುಗಳು ಸಂವಿಧಾನ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಹೇಳಿದರು. ಹಿರಿಯ ಎಎಪಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಸಿಐ ಅನ್ನು ಒತ್ತಾಯಿಸಿದರು.

ಈ ಕೃತ್ಯಗಳು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಗಂಭೀರ ಅಪರಾಧಗಳಾಗಿವೆ, ಸೆಕ್ಷನ್ 123(1) ಅಡಿಯಲ್ಲಿ ಲಂಚ, ಸೆಕ್ಷನ್ 123(2) ಅಡಿಯಲ್ಲಿ ಅನಗತ್ಯ ಪ್ರಭಾವ ಮತ್ತು ಬಿಎನ್‌ಎಸ್‌ನ ಸೆಕ್ಷನ್ 123(3ಎ) ಅಡಿಯಲ್ಲಿ ದ್ವೇಷವನ್ನು ಉತ್ತೇಜಿಸುವುದು ಎಂದು ಜಾಖಡ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ನಾಶಮಾಡುವ ಉದ್ದೇಶ: ಕಾಂಗ್ರೆಸ್​

ಸಿಸೋಡಿಯಾ ಅವರ ಹೇಳಿಕೆಗಳನ್ನು ಕಾಂಗ್ರೆಸ್, ಪ್ರಜಾಪ್ರಭುತ್ವವನ್ನು ನಾಶಮಾಡಲು ಉದ್ದೇಶಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಎಎಪಿ ಗೆಲ್ಲಲು ಅನ್ಯಾಯ ವಿಧಾನಗಳನ್ನು ಬಳಸಲು ಬಯಸುತ್ತಿದೆ ಎಂದು ಸಿಸೋಡಿಯಾ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 3.5 ವರ್ಷಗಳಿಂದ AAP ಪಂಜಾಬ್​ನಲ್ಲಿ ಆಡಳಿತ ನಡೆಸಲು ವಿಫಲವಾಗಿದೆ. ಈಗ, ಹತಾಶೆಯಿಂದ, ಪಂಜಾಬ್‌ನ ಶಾಂತಿ, ಪ್ರಜಾಪ್ರಭುತ್ವ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶಮಾಡಲು ಸಿದ್ಧರಾಗಿದ್ದಾರೆ ಎಂದು ಪ್ರತಾಪ್ ಟೀಕಾಪ್ರಹಾರ ನಡೆಸಿದ್ದಾರೆ.(ಏಜೆನ್ಸೀಸ್​)