ನ್ಯೂಸ್

ಅಕ್ರಮ ಸಂಬಂಧ ವಿರೋಧಿಸಿದಕ್ಕೆ ಮಗನನ್ನೇ ಕೊಂದ ಪಾಪಿಗಳು! ಏನಿದು ಘಟನೆ? Lover Plan

ಉತ್ತರ ಪ್ರದೇಶ: ಅಕ್ರಮ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿ ಹಾಗೂ ಆಕೆಯ ಸಂಗಾತಿಯೇ (Lover Plan) ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಲ್ಲಿ ಇತ್ತೀಚೆಗೆ ನಡೆದಿದೆ.

ಘಟನೆ ಏನು?

ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಬಲಿಪಶು ಪ್ರದೀಪ್ ಶರ್ಮಾ ಅವರ ಶವ ಪತ್ತೆಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಈ ಸಾವನ್ನು ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು. ನಂತರ ಪೊಲೀಸರು ಇದರ ಬಗ್ಗೆ ತನಿಖೆ ಆರಂಭಿಸಿದ್ದು, ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ದೃಢಪಡಿಸಿದ್ದಾರೆ.

ಪ್ರದೀಪ್ ತಂದೆಯ ಮರಣದ ನಂತರ, ಆತನ ತಾಯಿ ಆರೋಪಿ ಮಾಯಾಂಕ್​ನೊಂದಿಗೆ ಸಂಬಂಧ ಹೊಂದಿದ್ದಳು. ಆದರೆ, ಪ್ರದೀಪ್​ ಆಕೆಯ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಇವರಿಂದ ದೂರ ಉಳಿಯಲು ಆಂಧ್ರಪ್ರದೇಶದಲ್ಲಿ ಕೆಲಸ ಹುಡುಕಿಕೊಂಡು ಅಲ್ಲಿಯೇ ವಾಸವಿದ್ದನು.

ಇದರಿಂದ ಕೋಪಗೊಂಡ ತಾಯಿ ಮತ್ತು ಆತನ ಸಹೋದರ ರಿಷಿ ಕಟಿಯಾರ್ ಪ್ರದೀಪ್​ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಹಾಗೆಯೇ ತನ್ನ ಮಗನ ಹೆಸರಿನಲ್ಲಿ ಅನೇಕ ವಿಮಾ ಪಾಲಿಸಿಗಳನ್ನು ಖರೀದಿಸಿದ್ದರು . ಇದರಿಂದ ಹಣ ತೆಗೆದುಕೊಳ್ಳಬೇಕು ಎಂದು ಹೊಂಚಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆಂದು ಪ್ರದೀಪ್​​ ಮನೆಗೆ ಬಂದಾಗ ಆತನನ್ನು ಊಟಕ್ಕೆ ಹೊರಗೆ ಹೋಗೋಣ ಎಂದು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ ಪ್ರದೀಪ್​ನ ತಲೆಗೆ ಸುತ್ತಿಗೆಯಿಂದ ಹಲವು ಬಾರಿ ಹೊಡೆದಿದ್ದು, ಅಧಿಕ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಪ್ರದೀಪ್​ನ ಶವವನ್ನು ರಸ್ತೆ ಅಪಘಾತದಂತೆ ಬಿಂಬಿಸುವ ಪ್ರಯತ್ನದಲ್ಲಿ, ಆರೋಪಿಗಳು ಡೆರಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಹರಾಮು ಗ್ರಾಮದ ಬಳಿಯ ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಎಸೆದಿದ್ದರು.

ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸಲು ಪ್ರದೀಪ್​ ಮನೆಗೆ ತೆರಳಿದಾಗ ಆತನ ಅಜ್ಜ ರಿಷಿ ಮತ್ತು ಮಯಾಂಕ್​ ಸೇರಿ ನನ್ನ ಮೊಮ್ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ತಾಯಿ ಪ್ರದೀಪ್​ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಒತ್ತಾಯಿಸಿದರು.

ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಭೀರ ತನಿಖೆ ನಡೆಸಿದ್ದು, ಇದು ಅಪಘಾತವಲ್ಲ ಕೊಲೆ ಎಂದು ದೃಢಪಡಿಸಿದ್ದು, ಈ ಸಂಬಂಧ ಪೊಲೀಸರು ಮಾಯಾಂಕ್​ ಮತ್ತು ರಿಷಿ ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನು ಕೃತ್ಯಕ್ಕೆ ಬಳಸಲಾದ ಸುತ್ತಿಗೆ, ಕಾರು, ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)