ನವದೆಹಲಿ: ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್ಪೋರ್ಟ್ 82ನೇ ಸ್ಥಾನ ಪಡೆದುಕೊಂಡಿದೆ. ಸದ್ಯ ಭಾರತೀಯರಿಗೆ 58 ದೇಶಗಳಿಗೆ ವೀಸಾಮುಕ್ತ ಪ್ರವೇಶವಿದೆ. ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ರ್ ಅಸೋಸಿಯೇಷನ್ ದತ್ತಾಂಶವನ್ನು ಆಧರಿಸಿದ್ದು, ಪ್ರಪಂಚದಾದ್ಯಂತ ಪ್ರಯಾಣದ ಮಾಹಿತಿಯ ಅತ್ಯಂತ ನಿಖರ ದತ್ತಾಂಶಗಳನ್ನು ಹೊಂದಿದೆ. ಭಾರತದ ಪ್ರಸ್ತುತ ಶ್ರೇಣಿಯನ್ನು ಸೆನೆಗಲ್ ಮತ್ತು ತಜಕಿಸ್ತಾನದೊಂದಿಗೆ ಹಂಚಿಕೊಂಡಿದೆ.
ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್ ಅಂಗವೈಕಲ್ಯ ಸರ್ಟಿಫಿಕೆಟ್ ಅಸಲಿಯೇ? ಸತ್ಯ ಹೇಳಿದ ವೈಸಿಎಮ್ ಆಸ್ಪತ್ರೆ ವೈದ್ಯರು!
ಸಿಂಗಾಪುರದ ಪಾಸ್ಪೋರ್ಟ್ ವಿಶ್ವದಲ್ಲೇ ಅತ್ಯಂತ ಪ್ರಭಾವಶಾಲಿ ಎಂದು ಗುರುತಿಸಲಾಗಿದೆ. ಅದು 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಸ್ಪೇನ್, ಜಪಾನ್ ಎರಡನೇ ಸ್ಥಾನದಲ್ಲಿವೆ. ಈ ಪಾಸ್ಪೋರ್ಟ್ ಹೊಂದಿರುವವರು 192 ದೇಶಗಳಿಗೆ ತೆರಳಬಹುದು. ಮೂರನೇ ಸ್ಥಾನದಲ್ಲಿ, ಆಸ್ಟ್ರಿಯಾ, ಫಿನ್ಲಾ್ಯಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ದೇಶಗಳಿದ್ದು, 191 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತವೆ. ನ್ಯೂಜಿಲೆಂಡ್, ನಾರ್ವೆ, ಬೆಲ್ಜಿಯಂ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್ ಜತೆ ಯುನೈಟೆಡ್ ಕಿಂಗ್ಡಮ್ ನಾಲ್ಕನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ಮತ್ತು ಪೋರ್ಚುಗಲ್ 5ನೇ ಸ್ಥಾನವನ್ನು ಹಂಚಿಕೊಂಡರೆ, 186 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುವ ಯುನೈಟೆಡ್ ಸ್ಟೇಟ್ಸ್ ಎಂಟನೇ ಸ್ಥಾನಕ್ಕಿಳಿದಿದೆ. ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಸೇರಿ 58 ದೇಶಗಳಿಗೆ ಭಾರತ ವೀಸಾಮುಕ್ತ ಪ್ರವೇಶ ನೀಡುತ್ತಿದೆ.