ಸಾಂದರ್ಭಿಕ ಚಿತ್ರ 
ನ್ಯೂಸ್

ದೀರ್ಘಕಾಲ ಉಳಿಯುವಂತೆ ಪರ್ಫ್ಯೂಮ್ ಬಳಸುವುದು ಹೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್

ಹೊಸ ಹೊಸ ಪರ್ಫ್ಯೂಮ್ ಕೊಂಡುಕೊಂಡು ಅದನ್ನು ಬಳಸಲು ಕಾತುರದಿಂದ ಕಾಯುತ್ತಿರುತ್ತೇವೆ. ಅಲ್ಲದೆ ದೇಹದಲ್ಲಿನ ಬೆವರಿನ ವಾಸನೆಯನ್ನು ತಪ್ಪಿಸಲು ಸುಗಂಧ ದ್ರವ್ಯ ಬಳಸುತ್ತೇವೆ. ಆದರೆ ಅದು 2 ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮಂಕಾಗುತ್ತದೆ. ಬಳಸುವ ಪರ್ಫ್ಯೂಮ್ ಹೆಚ್ಚು ಕಾಲ ಉಳಿಯಬೇಕೇ.. ಅದನ್ನು ಹೇಗೆ ಬಳಸಿದರೆ ದೀರ್ಘಕಾಲ ಉಳಿಯುತ್ತದೆ. ಬಳಸುವ ವಿಧಾನವು ಅದು ಎಷ್ಟು ಕಾಲ ಉಳಿಯುತ್ತದೆ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ. ಪರ್ಫ್ಯೂಮ್ ಹೆಚ್ಚು ಕಾಲ ಉಳಿಯುವಂತೆ ಬಳಸುವುದು ಹೇಗೆ ಎಂಬ ಟಿಪ್ಸ್​​ ಇಲ್ಲಿ ನೀಡಲಾಗಿದೆ.

  • ಪರ್ಫ್ಯೂಮ್ ತೆಗೆದುಕೊಳ್ಳುವಾಗ ಎಚ್ಚರವಹಿಸಿ: ಪರ್ಫ್ಯೂಮ್ ಕೊಂಡುಕೊಳ್ಳುವಾಗ ಅದನ್ನು ಸೆಲೆಕ್ಟ್​​ ಮಾಡುವಾಗ ಎಚ್ಚರವಹಿಸಿ. ಉತ್ತಮ ಸುಗಂಧವುಳ್ಳ ಪರ್ಫ್ಯೂಮ್ ಕೊಂಡುಕೊಂಡರೆ ಹೆಚ್ಚು ಕಾಲ ಯಾವುದೇ ತೊಂದರೆ ಇಲ್ಲದೆ ಬಳಸಬಹುದು.
  • ಬಾಡಿ ಲೋಷನ್ ಮೇಲೆ ಬಳಸಿ: ಒಣ ಚರ್ಮದ ಮೇಲೆ ಪರ್ಫ್ಯೂಮ್ ಬಳಸಿದಾಗ ಅದು ಬೇಗನೆ ಆವಿಯಾಗುತ್ತದೆ. ಇದು ಒಣ ಮಣ್ಣಿನಲ್ಲಿ ನೀರನ್ನು ಸುರಿಯುವಂತೆ ಇರುತ್ತದೆ. ಆದ್ದರಿಂದ ಪರ್ಫ್ಯೂಮ್ ಬಳಸುವ ಮೊದಲು ನಿಮ್ಮ ಚರ್ಮವು ಮೃದು ಮತ್ತು ಹೈಡ್ರೀಕರಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ವಾಸನೆಯಿಲ್ಲದ ಲೋಷನ್ ಅಥವಾ ಮಾಯಿಶ್ಚರೈಸರ್ ಅನ್ನು ಅಪ್ಲೈ ಮಾಡಿ ಅದರ ಮೇಲೆ ಪರ್ಫ್ಯೂಮ್ ಬಳಸಿ.
  • ನಾಡಿ ಬಿಂದುಗಳ ಮೇಲೆ ಸುಗಂಧ ದ್ರವ್ಯವನ್ನು ಸ್ಪ್ರೇ ಮಾಡಿ: ಸುಗಂಧ ದ್ರವ್ಯವನ್ನು ಅನ್ವಯಿಸಲು ಉತ್ತಮವಾದ ಸ್ಥಳವೆಂದರೆ ಅದು ನಿಮ್ಮ ನಾಡಿ ಬಿಂದುಗಳಾಗಿವೆ. ಆ ಸ್ಥಳಗಳಲ್ಲಿ ನಿಮ್ಮ ರಕ್ತನಾಳಗಳು ಚರ್ಮಕ್ಕೆ ಹತ್ತಿರವಾಗಿರುವುದರಿಂದ ಬೆಚ್ಚಗಿನ ಮತ್ತು ತೇವವಾಗಿರುವ ಬಿಂದುಗಳಾಗಿವೆ. ನಿಮ್ಮ ಕುತ್ತಿಗೆ, ಗಲ್ಲ ಮತ್ತು ಕಾಲರ್‌ಬೋನ್‌ಗಳಂತಹ ನಿಮ್ಮ ಮೂಗಿನ ಹತ್ತಿರವಿರುವ ನಾಡಿ ಬಿಂದುಗಳ ಮೇಲೆ ಬಳಸಿ.
  • ಸ್ಪ್ರೇ ಮಾಡಿ ಆದರೆ ರಬ್ ಮಾಡಬೇಡಿ: ಒಂದು ಮಣಿಕಟ್ಟಿನ ಮೇಲೆ ಸ್ವಲ್ಪ ಸುಗಂಧ ಪರ್ಫ್ಯೂಮ್ ಬಳಸಿ ನಂತರ ಅದನ್ನು ಇನ್ನೊಂದು ಮಣಿಕಟ್ಟಿನಿಂದ ಉಜ್ಜುವುದು. ಈ ರೀತಿ ಮಾಡಬೇಡಿ. ಇದು ಪರ್ಫ್ಯೂಮ್ ಅನ್ನು ಹಾಳುಮಾಡುವುದರ ಜತೆಗೆ ದೀರ್ಘಕಾಲ ಉಳಿಯಲು ಬಿಡುವುದಿಲ್ಲ.
  • ತೇವಾಂಶ ಸ್ಥಳದಿಂದ ದೂರವಿಡಿ: ಬಾತ್ರೂಮ್ ಕ್ಯಾಬಿನೆಟ್​​ನಲ್ಲಿ ದುಬಾರಿ ಪರ್ಫ್ಯೂಮ್ ಬಾಟಲಿಗಳನ್ನು ಇರಿಸಿದರೆ, ತೇವಾಂಶವು ಸುಗಂಧ ದ್ರವ್ಯದ ಸುವಾಸನೆಯನ್ನು ನಾಶಪಡಿಸುತ್ತದೆ, ಆದ್ದರಿಂದ ಅವುಗಳನ್ನು ತಂಪಾದ ಕ್ಯಾಬಿನೆಟ್​​ನಲ್ಲಿ ಇರಿಸಿ, ಶಾಖದಿಂದ ದೂರವಿಡಿ.