ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10ರ ವಿಜೇತ, ನಟ ಕಾರ್ತಿಕ್ ಮಹೇಶ್ ಇದೀಗ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣಗಳಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ ಅವರ ಹೊಸ ಸಿನಿಮಾದ ಪೋಸ್ಟರ್ವೊಂದು 'ಸಿಂಪಲ್' ನಿರ್ದೇಶಕರಿಂದ ಚಿತ್ರರಸಿಕರ ಮುಂದೆ ಹಾಜರಾಗಿದೆ.
ಇದನ್ನೂ ಓದಿ: ಎಂಡಿಸಿಸಿ ಬ್ಯಾಂಕ್ ಆಡಳಿತ ಅಧ್ವಾನ: ಪರಿಷ್ಕೃತ ವೇತನ, ಬೋನಸ್, ತುಟ್ಟಿಭತ್ಯೆಗಾಗಿ ಸರ್ಕಾರದ ಮೊರೆ ಹೋದ ನೌಕರರು
ಕಾರ್ತಿಕ್ ಮಹೇಶ್ ಅಭಿನಯಿಸಲಿರುವ 'ರಿಚಿ ರಿಚ್' ಚಿತ್ರಕ್ಕೆ ಸಿಂಪಲ್ ಸುನಿ ಅವರ ನಿರ್ದೇಶಕರಾಗಿರುವುದು ಸದ್ಯ ಕನ್ನಡ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ 'ಸಿಂಪಲ್ಲಾಗೊಂದು ಲವ್ ಸ್ಟೋರಿ', 'ಒಂದು ಸರಳ ಪ್ರೇಮ ಕಥೆ' ಮೂಲಕವೇ ಪ್ರೇಕ್ಷಕರನ್ನು ಗೆದ್ದ ಸಿಂಪಲ್ ನಿರ್ದೇಶಕ, ಈಗ ಮತ್ತೊಂದು ವಿಭಿನ್ನ ಕಥಾಹಂದರ ಸಿನಿಮಾದಲ್ಲಿ ಕಾರ್ತಿಕ್ ಜತೆ ಕೈಜೋಡಿಸಿದ್ದಾರೆ.
ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಅಭಿನಯದ 'ಗತವೈಭವ' ಚಿತ್ರವನ್ನು ನಿರ್ದೇಶಿಸಿರುವ ಸಿಂಪಲ್ ಸುನಿ, ಈ ಚಿತ್ರವನ್ನು ಸಿನಿಪ್ರೇಕ್ಷಕರ ಮುಂದೆ ತರುವ ಮುನ್ನವೇ ಇದೀಗ ಮತ್ತೊಂದು ಸಿನಿಮಾ ಕುರಿತಂತೆ ತಮ್ಮದೇ ಶೈಲಿಯಲ್ಲಿ ಸಿಂಪಲ್ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ತಿಳಿಸಿದ ವಿಚಾರ ಹೀಗಿದೆ.
"ಎಲ್ಲರಿಗೂ ನಮಸ್ತೆ , ಒಳ್ಳೆ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಉದ್ದೇಶದಿಂದ ಹಾಗು ನಿಮ್ಮೆಲ್ಲರ ಆಶೀರ್ವಾದದೊಂದಿಗೆ AVR ENTERTAINER ಅನ್ನು ಅರವಿಂದ್ ವೆಂಕಟೇಶ್ ರೆಡ್ಡಿ ಶುಭಾರಂಭ ಮಾಡುತ್ತಿದ್ದಾರೆ. ಹಾಗೂ ಈ ಚಿತ್ರವನ್ನು ನಿಮ್ಮ ಮುಂದೆ ಮೊದಲು ಪ್ರಸ್ತುತಪಡಿಸುತ್ತಿದ್ದಾರೆ. ರಿಚಿ ರಿಚ್ (RICHIE RICH). ರಿದ್ದೇಶ್ ಚಿನ್ನಯ್ಯ (RICHIE ) ಆದ ಇವನು ಶ್ರೀಮಂತ (RICH) ಆಗುವುದು ಹೇಗೆಂದು ಯೋಚಿಸುತ್ತಿದ್ದಾನೆ. ಗೊತ್ತಿದ್ದವರು ಇವನಿಗೆ ಸಹಾಯ ಮಾಡಬಲ್ಲಿರಾ?" ಎಂದು ಪ್ರೇಕ್ಷಕರಿಗೆ ಪ್ರಶ್ನೆ ಹಾಕಿದ್ದಾರೆ.
"ನೀವಿಲ್ಲದಿರುವ ದಿನ ಬಡತನ, ನೀವಿದ್ದರೆ ಜತೆ ಅದೇ ಸಿರಿತನ, ಸದಾ ಜತೆಗಿದ್ದು ಹಾರೈಸಿ" ಎಂದು ಬರೆದು ತಮ್ಮ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.