ನ್ಯೂಸ್

ಸಿಮೋನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ! ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ | Mumbai

Mumbai : ದಿವಂಗತ ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಅವರ ಮಲತಾಯಿ ಸಿಮೋನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು ಚಿಕಿತ್ಸೆಗಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೊದಲು ದುಬೈನ ಕಿಂಗ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಸಿಮೋನ್ ಟಾಟಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಮುಂಬೈಗೆ ಕರೆದೊಯ್ಯಲಾಯಿತು. ಇನ್ನು ಅವರು ಶ್ವಾಸಕೋಶದಲ್ಲಿ ದ್ರವದ ಶೇಖರಣೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಮೋನೆ ಟಾಟ ಬಬ್ಬ ವ್ಯವಹಾರ ನಾಯಕಿಯಾಗಿ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, 1990 ರ ದಶಕದಲ್ಲಿ ಹಿಂದೂಸ್ತಾನ್ ಯೂನಿಲಿವರ್‌ಗೆ ಮಾರಾಟವಾಗುವ ಮೊದಲು Lakme ಕ್ರೀಂ ಅನ್ನು ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಬ್ರಾಂಡ್‌ಗಳಲ್ಲಿ ಒಂದನ್ನಾಗಿ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಸಿಮೋನ್ ನೇವಲ್ ಡುನಾಯರ್ ಆಗಿ ಜನಿಸಿದ ಅವರು, 1953 ರಲ್ಲಿ ಮೊದಲು ಭಾರತಕ್ಕೆ ಪ್ರವಾಸಿಯಾಗಿ ಬಂದರು. ಎರಡು ವರ್ಷಗಳ ನಂತರ, ಅವರು ನೇವಲ್ ಹೆಚ್. ಟಾಟಾ ಅವರನ್ನು ವಿವಾಹವಾದರು ಮತ್ತು ಟಾಟಾ ಗ್ರೂಪ್‌ನ ಗ್ರಾಹಕ ವ್ಯವಹಾರ ಉದ್ಯಮಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು 1960 ರ ದಶಕದಲ್ಲಿ ಗುಂಪಿನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.(ಏಜೆನ್ಸೀಸ್​)