ನ್ಯೂಸ್

ನಮ್ಮ ಸಿನಿಮಾ ಯಾವ ಚಿತ್ರಮಂದಿರದಲ್ಲಿ ರಿಲೀಸ್ ಆದ್ರೂ ಹಿಟ್ ಗ್ಯಾರಂಟಿ! ಹೆಚ್ಚುವರಿ ಥಿಯೇಟರ್​​ಗಾಗಿ ಸಲ್ಮಾನ್​ ಗಿಮಿಕ್​!? | Sikandar Release

ಮೋಹನ್​ ಶೆಟ್ಟಿ

Sikandar Release: ಇದೇ ಭಾನುವಾರ (ಮಾ.30) ದೇಶವ್ಯಾಪಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಸಿದ್ಧವಾಗಿರುವ 'ಸಿಕಂದರ್'​ ಚಿತ್ರ ಇದೀಗ ಬಿಟೌನ್​ನಲ್ಲಿ ಬಿಡುಗಡೆಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್​ ನಟ ಸಲ್ಮಾನ್ ಖಾನ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮೇಲೆ ಸಿನಿಪ್ರಿಯರಲ್ಲಿ ಕೊಂಚ ನಿರೀಕ್ಷೆಗಳು ಹೆಚ್ಚಿವೆ.

ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್​ಗಳು ಶುರುವಾಗಿದ್ದು, ಯುಗಾದಿ ಹಬ್ಬದಂದೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಜೋಡಿ ಅಭಿನಯದ ಸಿನಿಮಾ ಕುರಿತಂತೆ ಮಾತನಾಡಿರುವ ಗೈಟಿ ಗ್ಯಾಲಕ್ಸಿಯ ಕಾರ್ಯನಿರ್ವಾಹಕ ಹಾಗೂ ನಿರ್ದೇಶಕ ಮನೋಜ್ ದೇಸಾಯಿ, ಚಿತ್ರದ ಬಗ್ಗೆ ತಮ್ಮ ಉತ್ಸಾಹ, ಭರವಸೆ ವ್ಯಕ್ತಪಡಿಸಿದ್ದಾರೆ. "ಚಿತ್ರವು ಸೂಪರ್ ಹಿಟ್ ಆಗಲಿದೆ. ಯಾವ ಚಿತ್ರಮಂದಿರದಲ್ಲಿ ನಮ್ಮ ಸಿನಿಮಾವನ್ನು ಪ್ರದರ್ಶಿಸಿದರೂ ಅದು ಸೂಪರ್​ ಹಿಟ್ ಆಗುವುದು ಖಚಿತ. 100ಕ್ಕೆ 100 ಗೆಲುವು ಶತಸಿದ್ಧ ಎಂದು ಸ್ವತಃ ಸಲ್ಮಾನ್ ಅವರೇ ಹೇಳಿದ್ದಾರೆ" ಎಂದರು.

"ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್​ಗಳು ಶುರುವಾಗಿವೆ. ಸಲ್ಮಾನ್ ಖಾನ್​ ಅವರ ಭರವಸೆ ನಿಜಕ್ಕೂ ಗೆಲುವಿನ ಸಂಕೇತ ಎನ್ನಬಹುದು. ಈ ಮೂಲಕ ಅವರು ಸಿಕಂದರ್​ ಸಿನಿಮಾ ಬಿಡುಗಡೆಗೆ ಹೆಚ್ಚಿನ ಚಿತ್ರಮಂದಿಗಳನ್ನು ಕೊಡುವಂತೆ ಮನವಿ ಮಾಡಿದ್ದಾರೆ. ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ" ಎಂದು ದೇಸಾಯಿ ಹೇಳಿದ್ದಾರೆ,(ಏಜೆನ್ಸೀಸ್).