SIIMA Awards 2025: ದಕ್ಷಿಣ ಭಾರತದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ (SIIMA) ಸಮಾರಂಭವು ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಮೊದಲ ದಿನ, ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಿಗೆ ಮತ್ತು ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. 2024ರಲ್ಲಿ ತೆರೆಕಂಡ ಸಿನಿಮಾಗಳನ್ನು ಪರಿಗಣಿಸಿ, ವಿಜೇತರನ್ನು ಘೋಷಿಸಲಾಯಿತು. ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ಪಡೆದರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನಟ ಉಪೇಂದ್ರ ಸ್ವೀಕರಿಸಿದ್ದಾರೆ.
ಕನ್ನಡದಲ್ಲಿ ಯಾರಿಗೆಲ್ಲ ಪ್ರಶಸ್ತಿ?
- ಅತ್ಯುತ್ತಮ ನಟ: ಕಿಚ್ಚ ಸುದೀಪ್ (ಮ್ಯಾಕ್ಸ್)
- ಅತ್ಯುತ್ತಮ ನಟಿ: ಆಶಿಕಾ ರಂಗನಾಥ್ (02)
- ಅತ್ಯುತ್ತಮ ನಿರ್ದೇಶಕ: ಉಪೇಂದ್ರ (ಯುಐ)
- ಅತ್ಯುತ್ತಮ ನಟ (ಕ್ರಿಟಿಕ್ಸ್): ದುನಿಯಾ ವಿಜಯ್ (ಭೀಮ)
- ಅತ್ಯುತ್ತಮ ಚಿತ್ರ: ಕೃಷ್ಣಂ ಪ್ರಣಯ ಸಖಿ
- ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)
- ಅತ್ಯುತ್ತಮ ಚೊಚ್ಚಲ ನಟ: ಸಮರ್ಜೀತ್ ಲಂಕೇಶ್ (ಗೌರಿ)
- ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
- ಭರವಸೆ ಮೂಡಿಸಿದ ಹೊಸ ಪ್ರತಿಭೆ: ಸಾನ್ಯ ಅಯ್ಯರ್ (ಗೌರಿ)
- ಅತ್ಯುತ್ತಮ ಚೊಚ್ಚಲ ನಟಿ: ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
- ಅತ್ಯುತ್ತಮ ಕೋರಿಯೊಗ್ರಾಫರ್: ಇಮ್ರಾನ್ ಎಸ್ ಸರ್ಧಾರಿಯಾ
- ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
- ಅತ್ಯುತ್ತಮ ಗಾಯಕ: ಜಸ್ಕರನ್ ಸಿಂಗ್
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಐಶ್ಚರ್ಯ ರಂಗರಾಜನ್
- ಅತ್ಯುತ್ತಮ ಗೀತರಚೆನಕಾರ: ಡಾ. ವಿ.ನಾಗೇಂದ್ರ ಪ್ರಸಾದ್
ಟಾಲಿವುಡ್ ವಿಜೇತರ ಪಟ್ಟಿ
- ಅತ್ಯುತ್ತಮ ಚಿತ್ರ: ಕಲ್ಕಿ 2898 AD
- ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ-2)
- ಅತ್ಯುತ್ತಮ ನಟಿ: ರಶ್ಮಿಕಾ ಮಂದಣ್ಣ (ಪುಷ್ಪ-2)
- ಅತ್ಯುತ್ತಮ ನಿರ್ದೇಶಕ: ಸುಕುಮಾರ್ (ಪುಷ್ಪ-2)
- ಅತ್ಯುತ್ತಮ ನಟ (ವಿಮರ್ಶಕರು): ತೇಜ ಸಜ್ಜ (ಹನುಮಾನ್)
- ಅತ್ಯುತ್ತಮ ನಟಿ (ವಿಮರ್ಶಕರು): ಮೀನಾಕ್ಷಿ ಚೌಧರಿ (ಲಕ್ಕಿ ಭಾಸ್ಕರ್)
- ಅತ್ಯುತ್ತಮ ನಿರ್ದೇಶಕ (ವಿಮರ್ಶಕರು): ಪ್ರಶಾಂತ್ ವರ್ಮಾ (ಹನುಮಾನ್)
- ಅತ್ಯುತ್ತಮ ಪೋಷಕ ನಟ: ಅಮಿತಾಬ್ ಬಚ್ಚನ್ (ಕಲ್ಕಿ 2898 AD)
- ಅತ್ಯುತ್ತಮ ಪೋಷಕ ನಟಿ: ಅನ್ನೆ ಬೆನ್ (ಕಲ್ಕಿ 2898 AD)
- ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ-2)
- ಅತ್ಯುತ್ತಮ ಗೀತರಚನೆಕಾರ: ರಾಮ್ ಜೋಗಯ್ಯ ಶಾಸ್ತ್ರಿ (ಚುಟ್ಟಮಲ್ಲೆ)
- ಅತ್ಯುತ್ತಮ ಗಾಯಕ: ಶಂಕರ್ ಬಾಬು ಕಂದುಕುರಿ
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಿಲ್ಪಾ ರಾವ್ (ಚುಟ್ಟಮಲ್ಲೆ)
- ಅತ್ಯುತ್ತಮ ಖಳನಾಯಕ: ಕಮಲ್ ಹಾಸನ್ (ಕಲ್ಕಿ 2898 AD)
- ಅತ್ಯುತ್ತಮ ಚೊಚ್ಚಲ ನಟಿ: ಭಾಗ್ಯಶ್ರೀ ಬೋರ್ಸೆ (ಮಿ. ಬಚ್ಚನ್)
- ಅತ್ಯುತ್ತಮ ಚೊಚ್ಚಲ ನಟ: ಸಂದೀಪ್ ಸರೋಜ್
- ಅತ್ಯುತ್ತಮ ಚೊಚ್ಚಲ ನಿರ್ದೇಶಕ: ನಂದ ಕಿಶೋರ್ ಯೆಮಾನಿ
- ಅತ್ಯುತ್ತಮ ಹೊಸ ನಿರ್ಮಾಪಕಿ: ನಿಹಾರಿಕಾ ಕೊನಿಡೇಲಾ (ಸಮಿತಿ ಕುರ್ರೊಲು)
- ಅತ್ಯುತ್ತಮ ಛಾಯಾಗ್ರಾಹಕ: ರತ್ನವೇಲು (ದೇವರ)
- ಅತ್ಯುತ್ತಮ ಹಾಸ್ಯನಟ: ಸತ್ಯ (ಮತ್ತು ವಡಾಲರ 2)