ನ್ಯೂಸ್

ಸಿದ್ಧಾರ್ಥ್ Weds ಅದಿತಿ ; 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​ ಜೋಡಿ

ಹೈದರಾಬಾದ್​: ಸೌತ್ ಹೀರೋ ಸಿದ್ಧಾರ್ಥ್ ಮತ್ತು ನಾಯಕಿ ಅದಿತಿ ರಾವ್ ಹೈದರಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವನಪರ್ತಿಯ ಶ್ರೀರಂಗನಾಯಕ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು ಎನ್ನಲಾಗಿದೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಅದಿತಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನೀನು ನನ್ನ ಸೂರ್ಯ.. ನೀನು ನನ್ನ ಚಂದ್ರ.. ಮತ್ತು ನೀನು ನನ್ನ ನಕ್ಷತ್ರಗಳ ಆಕಾಶ. ಮಿಸೆಸ್ ಮತ್ತು ಮಿಸ್ಟರ್ ಸಿಧು" ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಸದ್ಯ ಸಿದ್ಧಾರ್ಥ್ ಮತ್ತು ಅದಿತಿ ಮದುವೆಯ ಫೋಟೋಗಳು ವೈರಲ್ ಆಗಿವೆ. ಇದರೊಂದಿಗೆ ಚಿತ್ರರಂಗದ ಗಣ್ಯರು ಹಾಗೂ ನೆಟ್ಟಿಗರು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಮಹಾ ಸಮುದ್ರಂ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗ ಏರ್ಪಟ್ಟ ಪರಿಚಯ ಸ್ವಲ್ಪ ಪ್ರೀತಿಗೆ ತಿರುಗಿತ್ತು. ಸಿದ್ಧಾರ್ಥ್ ತನ್ನ ನೆಚ್ಚಿನ ಸ್ಥಳದಲ್ಲಿ ಪ್ರಪೋಸ್ ಮಾಡಿರುವುದಾಗಿ ಅದಿತಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಇತ್ತೀಚೆಗಷ್ಟೇ ವನಪರ್ತಿಯ ಶ್ರೀರಂಗನಾಯಕ ಸ್ವಾಮಿ ದೇವಸ್ಥಾನ ತಮ್ಮ ಕುಟುಂಬಕ್ಕೆ ತುಂಬಾ ವಿಶೇಷ.. ಅದಕ್ಕೇ ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ.. ಮದುವೆಯೂ ಅಲ್ಲೇ ನಡೆಯಲಿದೆ ಎಂದಿದ್ದರು. ಸಿದ್ದಾರ್ಥ್ ಮತ್ತು ಅದಿತಿ ಅದೇ ದೇವಸ್ಥಾನದಲ್ಲಿ ಮದುವೆಯಾದರು.