ನ್ಯೂಸ್

ಬಿಎಸ್‌ವೈ ಜಾಗದಲ್ಲಿ ಈಗ ನಾನಿದ್ದಿದ್ದರೆ ಬಡವರಿಗೆ ತಲಾ 10 ಸಾವಿರ ರೂ. ಹಂಚುತ್ತಿದ್ದೆ: ಸಿದ್ದರಾಮಯ್ಯ

ಬೆಂಗಳೂರು: ಕರೊನಾ ಸೋಂಕು ಹಾವಳಿ ಎಬ್ಬಿಸಿರುವ ಈ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೆ ರಾಜ್ಯದ ಪ್ರತಿಯೊಬ್ಬ ಬಡವರಿಗೂ ತಲಾ 10 ಸಾವಿರ ರೂ. ಹಂಚುತ್ತಿದ್ದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ನೂತನ ಅಧ್ಯಕ್ಷರ ಪ್ರತಿಜ್ಞಾವಿಧಿ ಸಮಾರಂಭದ ಸಿದ್ಧತೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘‘ಯಡಿಯೂರಪ್ಪನವರ ಜಾಗದಲ್ಲಿ ಇವತ್ತು ನಾನಿದ್ದರೆ ದುರ್ಬಲ ವರ್ಗದವರಿಗೆ, ಬಡವರಿಗೆ, ಹಣದ ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ಸರ್ಕಾರದಿಂದ 10 ಸಾವಿರ ರೂ. ಕೊಡುತ್ತಿದ್ದೆ. ಅದರಿಂದ ಅವರ ಖರೀದಿ ಶಕ್ತಿ ಹೆಚ್ಚುತ್ತಿತ್ತು'' ಎಂದು ಹೇಳಿದರು. ಇದನ್ನೂ ಓದಿರಿ ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಮುಂತಾದವರು ಭಾಗವಹಿಸಿದ್ದರು. ಪ್ರತಿಜ್ಞಾವಿಧಿ ಕಾರ್ಯಕ್ರಮ ಜುಲೈ 2ಕ್ಕೆ ನಿಗದಿಯಾಗಿದೆ.