ನ್ಯೂಸ್

ಬಿಜೆಪಿಯ ಯೋಜನೆಯನ್ನು ಕೈಬಿಟ್ಟ ಕಾಂಗ್ರೆಸ್: ಜಿಲ್ಲೆಗೊಂದು ಗೋಶಾಲೆ, ವಿವೇಕ ಸಿರಿಗೆ ಎಳ್ಳುನೀರು!

Webdesk - Savina Naik

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ತಂದಿದ್ದ ಕೆಲವು ಯೋಜನೆಗಳನ್ನು ಕಾಂಗ್ರೆಸ್​​ ಸರ್ಕಾರ ಕೈ ಹಿಡುತ್ತಾ ಎನ್ನುವ ಪ್ರಶ್ನೆ ರಾಜ್ಯದ ಜನತೆಗೆ ಇತ್ತು. ಈ ಪ್ರಶ್ನೆಗೆ ಇಂದಿನ ಬಜೆಟ್​​ನಲ್ಲಿ ಉತ್ತರ ಸಿಕ್ಕಿದೆ.

ನಿರೀಕ್ಷೆಯಂತೆಯೇ ಸಿದ್ಧರಾಮಯ್ಯ ಸರ್ಕಾರ, ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಹಲವು ಕಾರ್ಯಕ್ರಮಗಳನ್ನು ಹೊಸ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿಲ್ಲ. ವಿವೇಕ ಸಿರಿ, ಜಿಲ್ಲೆಗೊಂದು ಗೋಶಾಲೆ ಯೋಜೆನಯನ್ನು ಬಜೆಟ್‌ನಲ್ಲಿ ಕೈಬಿಡಲಾಗಿದೆ.

ಗೋವುಗಳ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಕಳೆದ ಬಾರಿ ಜಿಲ್ಲೆಗೊಂದು ಗೋಶಾಲೆ ಆರಂಭ ಮಾಡುವ ಯೋಜನೆ ರೂಪಿಸಿತ್ತು. ಆದರೆ, ಹಾಲಿ ಸರ್ಕಾರದಲ್ಲಿ ಈ ಯೋಜನೆ ಮುಂದುವರಿಸುವ ಪ್ರಸ್ತಾಪ ಮಾಡಲಾಗಿಲ್ಲ. ವಿದ್ಯಾಸಿರಿ ಹಾಗೂ ವಿವೇಕ ಯೋಜನೆಯಡಿ ನಿರ್ಮಾಣವಾಗಲಿರುವ ಶಾಲಾ ಕೊಠಡಿಗಳ ಯೋಜನೆಯನ್ನು ಪ್ರಸ್ತಾಪ ಮಾಡಲಾಗಿಲ್ಲ.

ಬೇಸರ ಹೊರಹಾಕಿದ ಸಿದ್ದರಾಮಯ್ಯ: ಬಜೆಟ್‌ ವೇಳೆ ಕೇಂದ್ರ ಸರ್ಕಾರ ಮೇಲೆ ಸಿದ್ಧರಾಮಯ್ಯ ಬೇಸರ ಹೊರಹಾಕಿದರು. 15ನೇ ಹಣಕಾಸು ಆಯೋಗದ ಶಿಫಾರಸ್ಸು ಇದ್ದರೂ ಹೆಚ್ಚು ಅನುದಾನ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಜಿಎಸ್‌ಟಿ ಅನುದಾನ 2022ರ ಜುಲೈನಿಂದ ಸ್ಥಗಿತವಾಗಿದೆ. ಇದರಿಂದ 2022-23ನೇ ಸಾಲಿನಲ್ಲಿ 26954 ಕೋಟಿ ರೂಪಾಯಿ ರಾಜ್ಯಕ್ಕೆ ನಷ್ಟವಾಗಿದೆ.