ನ್ಯೂಸ್

ವಿಪಕ್ಷ ನಾಯಕ ಸಿದ್ದರಾಮಯ್ಯಗೆ 1 ಕೋಟಿ ರೂ. ಆಫರ್ ನೀಡಿದ ಯಾದಗಿರಿ ಅಭಿಮಾನಿ!

ಯಾದಗಿರಿ: ಯಾದಗಿರಿ ಕ್ಷೇತೃದಿಂದ ಸ್ಫರ್ಧೆ ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬ ಬಿಗ್​ ಆಫರ್​ ನೀಡಿದ್ದಾರೆ.

ಮಾಜಿ ತಾಪಂ ಸದಸ್ಯ ಚಂದ್ರಯ್ಯಾ ನಾಗರಾಳ ಎಂಬುವರು ಈ ಆಫರ್​ ನೀಡಿದ್ದು, ನನ್ನ ಆಸ್ತಿ ಮಾರಿ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಯಾದಗಿರಿ ಕ್ಷೇತ್ರ ಅಭಿವೃದ್ಧಿ ಸಂಪೂರ್ಣ ವಂಚಿತಗೊಂಡಿದೆ. ಇದೊಂದು ಜಿಲ್ಲೆ ಆಗಿದೆ ನಿಜ.‌‌ ಆದರೆ ಅಭಿವೃದ್ಧಿಯಿಂದ ಕಡೆಗಣಿಸಲಾಗಿದೆ. ಕ್ಷೇತ್ರದ ಹಯ್ಯಾಳ ಹೋಬಳಿಯನ್ನು ಯಾರೂ‌ ಕೇಳದ ಸ್ಥಿತಿ‌ ನಿರ್ಮಾಣಗೊಂಡಿದೆ.‌ ನಮ್ಮನ್ನು ಯಾರೂ ಕೇಳದಂತಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಯಾದಗಿರಿಯಿಂದ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದರು.

ಒಂದು ವೇಳೆ ಶಹಾಪುರ ಶಾಸಕ‌ ಈ ಬಾರಿ ಯಾದಗಿರಿಯಿಂದ ಸ್ಪರ್ಧೆ ಮಾಡಿದ್ದಲ್ಲಿ 25 ಲಕ್ಷ ರೂ. ಗಿಫ್ಟ್ ಕೊಡುತ್ತೇನೆ. ಒಂದು ವೇಳೆ ಇವರಿಬ್ಬರೂ ಸ್ಪರ್ಧೆ ಮಾಡಲು ಒಪ್ಪದಿದ್ದಲ್ಲಿ ಅಹಿಂದ ವರ್ಗದ ನಾಯಕರು ಸ್ಪರ್ಧೆ ಮಾಡಬೇಕು. ಅವರ ಪರ ಪ್ರಚಾರಕ್ಕೆ ಸಿದ್ದರಾಮಯ್ಯ ಬರಬೇಕು ಎಂದು ಆಗ್ರಹಿಸಿದರು.