terror attack| ಜಮ್ಮುಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಕರ್ನಾಟಕದ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಹತ್ತು ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ರಕ್ತಪಾತ; ಭಯೋತ್ಪಾದಕ ದಾಳಿ ವಿರುದ್ಧ ಸಿಡಿದೆದ್ದ ಬಾಲಿವುಡ್ ನಟ ಶಾರುಖ್ ಖಾನ್| terror attack
ದಾಳಿಯಲ್ಲಿ ರಾಜ್ಯದ ಮೂರು ಜನರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಭರತ್ ಭೂಷಣ್, ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಮಧುಸೂದನ್ ರಾವ್ (ತೆಲಂಗಾಣ ಮೂಲ) ಉಗ್ರರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಭರತ್ ಭೂಷಣ್ ಮತ್ತು ಅವರ ಕುಟುಂಬವು ಏಪ್ರಿಲ್ 18 ರಂದು ಟೂರ್ ಆಪರೇಟರ್ ಮೂಲಕ ಕಾಶ್ಮೀರಕ್ಕೆ ತೆರಳಿತ್ತು. ಅವರು ಈ ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಡಯಾಗ್ನೋಸ್ಟಿಕ್ ನಡೆಸುತ್ತಿದ್ದರು. ಭೂಷಣ್ ಯಶವಂತಪುರದ ಸುಂದರನಗರ ನಿವಾಸಿ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರು.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರ ಮೂಲದ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ.
ಮೂಲತಃ ಆಂಧ್ರದವರಾಗಿರುವ ಮಧುಸೂದನ್ ರಾವ್ ಅವರು, ಬೆಂಗಳೂರಿನಲ್ಲಿ ರಿಚಸ್ ಗಾರ್ಡನ್ನಲ್ಲಿ ವಾಸವಿದ್ದರು. ಕಳೆದ 3 ದಿನಗಳ ಹಿಂದೆ ಮಧುಸೂದನ್ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಆದರೆ ಉಗ್ರರ ದಾಳಿಯಲ್ಲಿ ಮಧುಸೂದನ್ ರಾವ್ ಕೊನೆ ಉಸಿರೆಳೆದಿದ್ದಾರೆ.
ಈ ಘಟನೆಯಲ್ಲಿ 26 ಜನ ಮೃತಪಟ್ಟು, 17 ಜನ ಗಾಯಗೊಂಡಿದ್ದಾರೆ.