ನ್ಯೂಸ್

ಸಿಡಿ ಲೇಡಿಗೆ ಮಹತ್ವದ ಸಲಹೆ ಕೊಟ್ಟ ಸಿದ್ದರಾಮಯ್ಯ!

arunakunigal

ಬೆಂಗಳೂರು: ಎಲ್ಲೋ‌ ಮರೆಯಾಗಿದ್ದುಕೊಂಡು ಹೇಳಿಕೆ ಕೊಡುವ ಬದಲು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ಕೊಡಿ ಎಂದು ಸಿಡಿ ಲೇಡಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ನ 'ಸಂತ್ರಸ್ತ' ಯುವತಿ ಶುಕ್ರವಾರ ಅಜ್ಞಾತ ಸ್ಥಳದಿಂದ ಮೂರನೇ ವಿಡಿಯೋ ಬಿಡುಗಡೆ ಮಾಡಿದ ಸಂದರ್ಭದಲ್ಲೇ ಸಿದ್ದರಾಮಯ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ. ಆಕೆಗೆ ಹಾಗೂ ಆಕೆಯ ಪೋಷಕರಿಗೆ ಸೂಕ್ತ ರಕ್ಷಣೆ ನೀಡುವಂತೆಯೂ ಸರ್ಕಾರವನ್ನು ಸಿದ್ದರಾಮಯ್ಯ ಇದೇ ವೇಳೆ ಒತ್ತಾಯಿಸಿದ್ದಾರೆ.

ರಮೇಶ್​ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ರಮೇಶ್, ಈ ಹೇಳಿಕೆಯಿಂದ ಸಿದ್ದರಾಮಯ್ಯ ಮೇಲಿನ ಗೌರವ ಕಡಿಮೆಯಾಗಿದೆ ಎಂದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಸತ್ಯ ಹೇಳಿದ್ದರಿಂದ ಅವರ ಗೌರವ ಕಡಿಮೆಯಾದರೆ ನಾನೇನು ಮಾಡಲಾಗಲ್ಲ, ಅದಕ್ಕೆ ಹೊಣೆಗಾರನೂ ನಾನಲ್ಲ ಎಂದು ಮಾತಿನಲ್ಲೇ ಛಾಟಿಬೀಸಿದರು.