ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್(Shraddha Kapoor) ತನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಡಲು ಇಷ್ಟಪಡುತ್ತಾರೆ. ಆದರೆ ಕಳೆದ ಕೆಲವು ಸಮಯದಿಂದ ಅವರ ವದಂತಿಯ ಗೆಳೆಯ ರಾಹುಲ್ ಮೋದಿಯೊಂದಿಗಿನ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದಾರೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗವಾಗಿ ಮಾತನಾಡಿಲ್ಲ, ಆದರೆ ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
ಇದನ್ನು ಓದಿ: ವದಂತಿ ಗೆಳೆಯನೊಂದಿಗೆ ಮದುವೆ ಆರತಕ್ಷತೆಗೆ ಹಾಜರಾದ ಬಿಟೌನ್ ನಟಿ; ರಾಹುಲ್ ಮೋದಿ ಜತೆ ಶ್ರದ್ಧಾ ಪೋಸ್ | Shraddha Kapoor
ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ಪ್ರಯಾಣಿಸುತ್ತಿರುವುದು, ಕೆಲವೊಮ್ಮೆ ಶಾಪಿಂಗ್ ಮಾಡುತ್ತಿರುವುದು, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಮದುವೆಯ ಆರತಕ್ಷತೆಯಲ್ಲಿ ನಟಿ ಶ್ರದ್ಧಾ ಕಪೂರ್ ಭಾಗಿಯಾಗಿದ್ದರು. ವಿವಾಹದ ಆರತಕ್ಷತೆಯ ವೇದಿಕೆಯಲ್ಲಿ ವಧು-ವರರ ಜತೆಗೆ ಫೋಟೋಗೆ ಫೋಸ್ ನೀಡುವ ಸಮಯದಲ್ಲಿ ಶ್ರದ್ಧಾ, ಅವರ ಗೆಳೆಯ ರಾಹುಲ್ ಮೋದಿ ಕೂಡ ವೇದಿಕೆಯಲ್ಲಿ ಅವರೊಂದಿಗೆ ಸೇರಿಕೊಳ್ಳುವ ವಿಡಿಯೋ ವೈರಲ್ ಆಗಿತ್ತು.
ಆದರೆ ಅವರಿಬ್ಬರ ನಡುವಿನ ಸಂಬಂಧವನ್ನು ಅಧಿಕೃತವಾಗಿ ಯಾರೊಬ್ಬರು ದೃಢಪಡಿಸಿಲ್ಲವಾದರೂ, ವದಂತಿಗೆ ಪುಷ್ಠಿ ನೀಡುವಂಥಾ ಫೋಟೋವೊಂದು ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶ್ರದ್ಧಾ ಕಪೂರ್ ಭಾನುವಾರ(ಮಾರ್ಚ್ 2) ಮುಂಬೈನಲ್ಲಿ ಕಾಣಿಸಿಕೊಂಡರು. ಅಭಿಮಾನಿಗಳು ಮತ್ತು ಫೋಟೋಗ್ರಾಫರ್ ಅವರೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಲು ಅವರ ಬಳಿಗೆ ಬಂದಾಗ ಅವರ ಫೋನ್‌ನಲ್ಲಿದ್ದ ವಾಲ್‌ಪೇಪರ್ ಅಭಿಮಾನಿಗಳ ಗಮನ ಸೆಳೆದಿದೆ.
ಮೊಬೈಲ್ ಫೋನ್‌ನ ವಾಲ್‌ಪೇಪರ್ ಅನ್ನು ಜೂಮ್ ಇನ್ ಮಾಡಿದಾಗ ಅದರಲ್ಲಿ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಅವರ ಫೋಟೋ ಕಂಡುಬಂದಿದೆ. ಅದರಲ್ಲಿ ಕನ್ನಡಿ ಮುಂದೆ ನಿಂತಿರುವ ಶ್ರದ್ಧಾರನ್ನು ರಾಹುಲ್ ಮೋದಿ ಹಿಂದೆಯಿಂದ ಅಪ್ಪಿಕೊಂಡಿರುವುದನ್ನು ನೋಡಬಹುದು. ಶ್ರದ್ಧಾ ಕಪೂರ್ ರಾಹುಲ್ ಮೋದಿ ಜತೆಗಿನ ಸಂಬಂಧವನ್ನು ಇನ್ನೂ ದೃಢಪಡಿಸಿಲ್ಲದಿರಬಹುದು, ಆದರೆ ಈಗ ಅವರ ಫೋನ್‌ನ ವಾಲ್‌ಪೇಪರ್ ಎಲ್ಲವನ್ನೂ ಬಹಿರಂಗಪಡಿಸಿದೆ.
ಅವರಿಬ್ಬರ ಫೋಟೋ ನೋಡಿದರೆ ಅವರು ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸುತ್ತಿರುವಂತೆ ತೋರುತ್ತದೆ. ಈ ವಿಡಿಯೋ ಕಾಣಿಸಿಕೊಂಡ ನಂತರ ಶ್ರದ್ಧಾ ಅವರು ರಾಹುಲ್ ಮೋದಿ ಜತೆಗಿನ ಸಂಬಂಧವನ್ನು ಸನ್ನೆಗಳ ಮೂಲಕ ದೃಢಪಡಿಸಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಪ್ರಸ್ತುತ ನಟಿಯ ಈ ವಿಡಿಯೋಗೆ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.ಶ್ರದ್ಧಾ ಕಪೂರ್ ‘ಸ್ತ್ರೀ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಸಿನಿಮಾಗಳ ಕುರಿತ ಅಧಿಕೃತ ಪ್ರಕಟಣೆಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.(ಏಜೆನ್ಸೀಸ್)