ವಿಜಯವಾಡ: ಸುಡು ಬೇಸಿಗೆ ಆರಂಭವಾಗಿರುವುದರಿಂದ ಈ ಸಮಯದಲ್ಲಿ ತಂಪು ಪಾನೀಯಗಳಿಗೆ ತುಂಬಾ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಆದರೆ, ತಂಪು ಪಾನೀಯ ಸಿಕ್ಕಿದ ಖುಷಿಯಲ್ಲಿ ಅದನ್ನು ಒಮ್ಮೆ ಪರಿಶೀಲಿಸದೇ ಹಾಗೇ ಕುಡಿದು ಬಿಡಬೇಡಿ. ಏಕೆಂದರೆ ನಾವಿಂದು ನಿಮಗೆ ನೀಡುತ್ತಿರುವ ತಾಜಾ ಉದಾಹರಣೆಯು ಆಘಾತ ಉಂಟು ಮಾಡಲಿದೆ.
ಹೌದು. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿರುವ ಪೆರೂರ್ ವೈ ಜಂಕ್ಷನ್ ಬೇಕರಿಯಲ್ಲಿ ಖರೀದಿಸಿ ಕೂಲ್ ಡ್ರಿಂಕ್ಸ್ನಲ್ಲಿ ಸತ್ತ ಹಾವಿನ ಮರಿ ನೋಡಿ ಗ್ರಾಹಕ ಬೆಚ್ಚಿ ಬಿದ್ದಿದ್ದಾನೆ.
ಇದನ್ನೂ ಓದಿರಿ: 2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!
ಸ್ಥಳೀಯ ಬೇಕರಿಗೆ ಹೋಗಿ ಕೂಲ್ ಡ್ರಿಂಕ್ಸ್ ಖರೀದಿಸಿದ ಗ್ರಾಹಕ ಮನೆಗೆ ಬಂದು ಬಾಟಲ್ ಮುಚ್ಚಳ ತೆಗೆದು ತಂಪು ಪಾನೀಯ ಕುಡಿಯುವಾಗ ಏನೋ ಒಂದು ವಿಚಿತ್ರವಾಗಿ ಕಂಡಿದೆ. ಬಳಿಕ ಕುಡಿಯುವುದನ್ನು ನಿಲ್ಲಿಸಿ ಬಾಟಲ್ ಕೆಳಗೆ ನೋಡಿದಾಗ ಹಾವಿನ ಮರಿ ಕಂಡು ಗ್ರಾಹಕನಿಗೆ ಭಾರಿ ಆಘಾತವಾಗಿದೆ.
ಇದೀಗ ಕೂಲ್ ಡ್ರಿಂಕ್ನಲ್ಲಿ ಹಾವಿನ ಮರಿ ಇರುವ ಸುದ್ದಿ ಆಂಧ್ರದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಮೂರು ದಿನಗಳ ಹಿಂದೆ ಕೂಲ್ ಡ್ರಿಂಕ್ಸ್ ಏಜೆನ್ಸಿ ಅದನ್ನ ಒದಗಿಸಿತ್ತು. ಇದೀಗ ಗ್ರಾಹಕ ಬೇಕರಿಗೆ ದೂರು ನೀಡಿದ್ದು, ಬೇಕರಿಯವರು ಏಜೆನ್ಸಿ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಬಾಟಲ್ ಒಳಗೆ ಹಾವು ಹೇಗೆ ಬಂದಿತು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಹೀಗಾಗಿ ಬೇಸಿಗೆ ಇರುವುದರಿಂದ ಕೂಲ್ ಡ್ರಿಂಕ್ಸ್ ಮೊರೆ ಹೋಗುವವರು ಕುಡಿಯುವ ಮುನ್ನ ಅದನ್ನೊಮ್ಮೆ ಪರಿಶೀಲಿಸುವುದು ಒಳಿತು. ಇಲ್ಲವಾದಲ್ಲಿ ಇದೇ ರೀತಿಯ ಅನುಭವವನ್ನು ಒಂದು ನೀವು ಎದುರಿಸಿದರೆ ಅಚ್ಚರಿಯೇನಿಲ್ಲ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ