ನ್ಯೂಸ್

ಅಗ್ನಿಸಾಕ್ಷಿ ನಟಿ ಮದುವೆ ಫಿಕ್ಸ್‌; ತಾಂಬೂಲ ಬದಲಿಸಿಕೊಂಡ ಕುಟುಂಬಸ್ಥರು

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್​ ಮೂಲಕವಾಗಿ ಕನ್ನಡಿಗರ ಮನೆತಾಗಿದ್ದ ಹಾಗೂ ಬಿಗ್​ಬಾಸ್​​ ತೆಲುಗು ಸ್ಪರ್ಧಿಯಾಗಿದ್ದ ನಟಿ 'ಶೋಭಾ ಶೆಟ್ಟಿ'ಗೆ ಮದುವೆ ಫಿಕ್ಸ್​​ ಆಗಿದ್ದು, ಕುಟುಂಬಸ್ಥರು ತಾಂಬೂಲವನ್ನು ಬದಲಿಸಿಕೊಂಡಿದ್ದಾರೆ.

ತೆಲುಗು ಬಿಗ್‌ಬಾಸ್‌ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದೆ. ತೆಲುಗು ನಟ ಯಶವಂತ್ ಜೊತೆ ಶೋಭಾ ಶೆಟ್ಟಿ ಎಂಗೇಜ್ ಆಗಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ತೆಲಗು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಕೊನೆಯವರೆಗೂ ಇದ್ದುಕೊಂಡು ಕಠಿಣ ಸ್ಪರ್ಧೆ ನೀಡಿ ಖ್ಯಾತಿ ಗಳಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ.. ಶೋಭಾಶೆಟ್ಟಿ ತನ್ನ ಬಾಯ್ ಫ್ರೆಂಡ್ ಅನ್ನು ಎಲ್ಲರಿಗೂ ಪರಿಚಯಿಸಿದರು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಕಾರ್ತಿಕದೀಪ ಧಾರಾವಾಹಿಯಲ್ಲಿ ತಮ್ಮ ಜತೆ ನಟಿಸಿದ್ದ ಯಶವಂತ್ ನನ್ನು ಶೋಭಾ ಪ್ರೀತಿಸುತ್ತಿದ್ದಾರೆ ಎನ್ನಲಾಗಿತ್ತು. ಬಿಗ್​ಬಾಸ್​​ ಮನೆಯಿಂದ ಹೊರ ಬಂದ ಬಳಿಕ ಮದುವೆಯಾಗುವುದಾಗಿಯೂ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ತಾಂಬೂಲ ಕಾರ್ಯಕ್ರಮದೊಂದಿಗೆ ಮದುವೆಯ ಮೊದಲ ಹೆಜ್ಜೆಯನ್ನು ಆಚರಿಸಲಾಯಿತು. ಜನವರಿ 20 ಶೋಭಾಶೆಟ್ಟಿಯವರ ಜನ್ಮದಿನ. ಪ್ರತಿ ವರ್ಷ ಆ ದಿನದಂದು ಅವರು ತಮ್ಮ ಮನೆಗಳಲ್ಲಿ ಪೂಜೆ ಮತ್ತು ಆಚರಣೆಗಳನ್ನು ಮಾಡುತ್ತಾರೆ. ಈ ವರ್ಷ  ಮದುವೆ ತಾಂಬೂಲ ಕಾರ್ಯಕ್ರಮವೂ ನಡೆದಿದೆ.

ಶೋಭಾಶೆಟ್ಟಿ ಮತ್ತು ಯಶವಂತ್ ತಮ್ಮ ಕುಟುಂಬ ಸದಸ್ಯರ ನಡುವೆ ಮದುವೆ ತಾಂಬೂಲ ಬದಲಿಸಿಕೊಂಡಿದ್ದಾರೆ. ಜತೆಗೆ ಎಲ್ಲರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಶೋಭಾಶೆಟ್ಟಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಂಬಂಧ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅದೇ ವೀಡಿಯೋದಲ್ಲಿ ಶೋಭಾ ಅವರು ತಾವು ಮತ್ತು ಯಶವಂತ್ ಅವರ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಎಲ್ಲಾ ದಿನಾಂಕಗಳನ್ನು ನೋಡಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ.ಇಷ್ಟು ಪ್ರೀತಿ ತೋರಿದ ಪ್ರೇಕ್ಷಕರಿಗೆ ಶೋಭಾ ಧನ್ಯವಾದ ಹೇಳಿದರು.

ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಪ್ರೇಕ್ಷಕರು ಶೋಭಾಶೆಟ್ಟಿ ಮತ್ತು ಯಶವಂತ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.