ನ್ಯೂಸ್

ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದಾರೆ : ಶೋಭಾ ಕರಂದ್ಲಾಜೆ

- ಜನ ಚುನಾವಣೆಯಂದು ಉತ್ತರ ನೀಡಲಿದ್ದಾರೆ

ಬೆಂಗಳೂರು: ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದಾರೆ. ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದಿದ್ದರೂ ಒಂದೇ ಸ್ಥಾನ ಸಿಕ್ಕಿದೆ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಸೋಲುವ ಭೀತಿಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಹಲ್ಲೆ ಮಾಡುತ್ತಿದೆ. ಇದು ಖಂಡನೀಯ, ಚುನಾವಣೆ ಚುನಾವಣೆಯಂತೆ ಎದುರಿಸಿ, ಗೂಂಡಾಗಿರಿ ಮಾಡಬೇಡಿ, ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿದ್ದರೆ ಈ ರೀತಿ ಗೂಂಡಾಗಿರಿ ಮಾಡಬೇಕಾದ ಸ್ಥಿತಿ ಬರಿತರತಿರಲಿಲ್ಲ, ಅಲ್ಲಿ ನಮ್ಮ ಕಾರ್ಯಕರ್ತರ ಭಯಪಡಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಸಂಸ್ಕೃತಿಯೇ ಮೋದಿ ಅವರನ್ನು ಟೀಕಿಸುವುದಾಗಿದೆ. ಪಿಎಂ ಸ್ಥಾನ ನೆಹರೂ ಕುಟುಂಬದ ಆಸ್ತಿ ಎನ್ನುವಂತಾಗಿದೆ, ಅವರ ಆಸ್ತಿಯನ್ನು ಯಾರೋ ಕಬಳಸಿದಂತಾಗಿದೆ ಹೀಗಾಗಿ ಅವರು ಮೋದಿ ವಿರುದ್ಧ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸೋನಿಯಾ, ಪ್ರಿಯಾಂಕಾ ಹೀಗೆಲ್ಲಾ ಮಾತನಾಡಿದ್ದಾರೆ ಇದು ಕಾಂಗ್ರೆಸ್ ಸಂಸ್ಕೃತಿ, ಇದಕ್ಕೆ ಜನ ಪಾಠ ಕಲಿಸಲಿದ್ದಾರೆ, ಚುನಾವಣೆಯಂದು ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.