ನ್ಯೂಸ್

'ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿ ಸರ್ ಗಲಿಬಿಲಿಗೊಂಡಿದ್ದರು'

ಚೆನ್ನೈ: ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ಶಿವ ಸಿನಿಮಾದ ಮಳೆಯ ನಡುವೆ ನಡೆದ ಶೂಟಿಂಗ್​ ಸಂದರ್ಭದಲ್ಲಿ ಅನುಭವಿಸಿದ ಕರಾಳ ಅನುಭವವನ್ನು ದಕ್ಷಿಣ ಭಾರತ ನಟಿ ಶೋಭನಾ ಅವರು ವಿವರಿಸಿದ್ದಾರೆ.

ಪೂರ್ವಯೋಜಿತ ಕೊಲೆ

ಶೋಭನಾ ಅವರ ಪ್ರಕಾರ, ಮಳೆಯಲ್ಲಿ ನಡೆಯುವ ಹಾಡುಗಳು ಚಿತ್ರೀಕರಣ ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಮತ್ತು ಪಾರದರ್ಶಕ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.

ನನ್ನ ಜತೆ ಚರ್ಚಿಸಿರಲಿಲ್ಲ

ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಅವರೊಂದಿಗಿನ ಸಂದರ್ಶನದಲ್ಲಿ ನಟಿ ಶೋಭನಾ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಶಿವ ಸಿನಿಮಾದಲ್ಲಿ ಮಳೆಯ ನಡುವೆ ಹಾಡನ್ನು ಚಿತ್ರೀಕರಿಸುವುದಾಗಿ ನನ್ನ ಜತೆ ಚರ್ಚಿಸಿರಲಿಲ್ಲ. ಆದರೆ ನಾನು ಕಾಸ್ಟ್ಯೂಮ್ ಅನ್ನು ನೋಡಿದಾಗ ಏನೋ ಒಂದು ನಡೆಯುತ್ತದೆ ಎಂದು ಅರ್ಥವಾಯಿತು.

ಪಾರದರ್ಶಕ ಸೀರೆ

ಅದು ಬಿಳಿ ಬಣ್ಣದ ಪಾರದರ್ಶಕ ಸೀರೆಯಾಗಿತ್ತು. ಹೀಗಾಗಿ ಮಳೆಯ ದೃಶ್ಯಕ್ಕಾಗಿ ಧರಿಸಲು ನನ್ನ ಬಳಿ ಯಾವುದೇ ಒಳ ಉಡುಪು ಇಲ್ಲ ಎಂದು ನಾನು ಕಾಸ್ಟ್ಯೂಮ್ ಹುಡುಗನಿಗೆ ಹೇಳಿದೆ. ಹಾಡಿಗೆ ರೆಡಿಯಾಗಲು ಮನೆಗೆ ಹೋಗಬಹುದೇ ಎಂದು ಕೇಳಿದೆ. ಮುಂದಿನ 10 ನಿಮಿಷಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. ಒಂದು ರೀತಿಯಲ್ಲಿ ಮಳೆ ಹಾಡು ಪೂರ್ವಭಾವಿ ಕೊಲೆಯಂತಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದು ಬಲಿಪಶುವಿಗೆ ಮಾತ್ರ ತಿಳಿದಿರುವುದಿಲ್ಲ ಎಂದು ಶೋಭನಾ ತಿಳಿಸಿದರು.

ಗೊಂದಲಕ್ಕೊಳಗಾದ ರಜನಿ

ಮಳೆಯಲ್ಲಿ ಹಾಡಿನ ಶೂಟಿಂಗ್​ ಅನ್ನು ರಜನಿಕಾಂತ್ ಜತೆ ಚಿತ್ರೀಕರಿಸಲಾಗಿದೆ. ಸೂಪರ್‌ಸ್ಟಾರ್ ರಜನಿ ಸರ್​ ಓರ್ವ ಜೆಂಟಲ್​ಮ್ಯಾನ್​ ಎಂದು ನಟಿ ಕರೆದಿದ್ದಾರೆ. ಶೂಟಿಂಗ್​ ಅನ್ನು ತಡಮಾಡಲು ಬಯಸದ ಕಾರಣ, ನಾನು ಪ್ಲಾಸ್ಟಿಕ್ ಟೇಬಲ್ ಕವರ್ ಅನ್ನು ಶೂಟಿಂಗ್​ ಸಮಯದಲ್ಲಿ ಒಳ ಉಡುಪುಗಳಾಗಿ ಬಳಸಿದ್ದೇನೆ. ರಜನಿ ಅವರು ನನ್ನನ್ನು ಡಾನ್ಸ್​ ಮಾಡುವ ವೇಳೆ ಮೇಲಕ್ಕೆ ಎತ್ತಿದಾಗ ಕವರ್ ಸದ್ದು ಮಾಡತೊಡಗಿತು. ರಜನಿ ಅವರೇ ಗೊಂದಲಕ್ಕೊಳಗಾದರು, ಆದರೆ ಅದೃಷ್ಟವಶಾತ್, ಅವರು ಅದರ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಶೋಭಾನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)